ಮೂಲ ಹಿಂದೀ ಕೀರ್ತನೆಗಳ ಕನ್ನಡ ಅನುವಾದವಾದ ’ಕಬೀರ ವಚನಾವಲಿ’ ಕೃತಿಯು ಹಿಂದೀ ಸಂತ ಸಾಹಿತ್ಯ ಮಾಲಿಕೆಯಲ್ಲಿ ಪ್ರಕಟವಾದ ಕೃತಿಯಾಗಿದೆ.
ಹಿಂದೀ ಸಾಹಿತ್ಯ ಚರಿತ್ರೆಯ ವಿಶಾಲವಾದ ಪರಂಪರೆಯಲ್ಲಿ ಸಂತ ಕಬೀರದಾಸರ ಸ್ಥಾನವು ಅತ್ಯಂತ ಗೌರವಯುತವಾದದ್ದಾಗಿದೆ. ಸಂತನಾಗಿ ಹಾಗೂ ಕವಿಯಾಗಿ ಏಕಕಾಲಕ್ಕೆ ತನ್ನ ಸಮಕಾಲೀನ ಹಾಗೂ ನಂತರದ ಕಾಲದ ಸಮಾಜ, ಸಂಸ್ಕೃತಿ ಹಾಗೂ ಸಾಹಿತ್ಯಗಳ ಮೇಲೆ ಇಷ್ಟು ಅಚ್ಚಳಿಯದ ಪ್ರಭಾವವನ್ನು ಬೀರಿದ ಕೆಲವೇ ಯುಗಪುರುಷರಲ್ಲಿ ಕಬೀರರು ಒಬ್ಬರು. ಈ ಹಂತದಲ್ಲಿ ಸಂತ ಶ್ರೇಷ್ಠ ತುಳಸೀದಾಸರನ್ನು ಮಾತ್ರ ಕಬೀರರೊಂದಿಗೆ ಹೋಲಿಸಲು ಸಾಧ್ಯ. ಆದರೆ ತುಳಸೀದಾಸರಿಗೆ ಸಾಧ್ಯವಾಗದ ನಿಷ್ಠುರತೆ, ನಿರ್ಲಿಪ್ತತೆ ಹಾಗೂ ನಿರ್ಮಮತೆಗಳು ಕಬೀರರಿಗೆ ಹೇಗೆ ಸಾಧ್ಯವಾದವು ಎಂಬುದು ಈ ಕೃತಿ ತಿಳಿಸುತ್ತದೆ.
©2024 Book Brahma Private Limited.