ಜ್ಞಾನ ವಿಜ್ಞಾನ ತತ್ವಜ್ಞಾನ ಕುರಿತಂತೆ ಇಂಗ್ಲಿಷ್ ಭಾಷೆಯಲ್ಲಿ ಹರಿದ ಅರಿವಿನ ಧಾರೆಯನ್ನು ಕನ್ನಡಕ್ಕೆ ತಂದಿದ್ದಾರೆ ಕೆ.ವಿ ತಿರುಮಲೇಶ್. ಹೀಗೆ ಬೇರೆ ಬೇರೆ ಧಾರೆಗಳು ಹರಿದಾಗಲೇ ಕನ್ನಡ ದಷ್ಟಪುಷ್ಟವಾಗುವುದು. ಸಾಹಿತಿಯೂ, ವಿದ್ವಾಂಸರೂ ಆದ ತಿರುಮಲೇಶರು ಕೃತಿಯ ಬಗ್ಗೆ ಹೇಳುವುದು ಹೀಗೆ:
'ಜ್ಞಾನ ವಿಜ್ಞಾನ ತತ್ವಜ್ಞಾನ-ಬಹಳ ಗಹನವಾದ ವಿಷಯಗಳು. ಇವುಗಳಲ್ಲಿ ತೊಡಗಿದ ಮೇಧಾವಿಗಳಿದ್ದಾರೆ. ಅವರು ಮಾನವ ಜೀವನವನ್ನು ಅರ್ಥಪೂರ್ಣವಾಗಿ ಮಾಡಿದ್ದಾರೆ. ನಾನಾದರೆ ಜ್ಞಾನಿಯೂ ಅಲ್ಲ. ವಿಜ್ಞಾನಿಯೂ ಅಲ್ಲ, ತತ್ವಜ್ಞಾನಿಯೂ ಅಲ್ಲ, ನಾನೊಬ್ಬ ಸಾಮಾನ್ಯ ಮನುಷ್ಯ, ಈ ವಿಷಯಗಳ ಅರ್ಥವನ್ನು ಸರಿಯಾಗಿ ತಿಳಿದಿದ್ದೇನೆ ಎನ್ನಲಾರೆ. ಆದರೂ ತಿಳಿಯುವ ಸಹಜ ಕುತೂಹಲ ಯಾವತ್ತೂ ಇರಿಸಿಕೊಂಡಿದ್ದೇನೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲವು ಲೇಖನಗಳನ್ನು ಮತ್ತು ಪುಸ್ತಕಗಳನ್ನು ನನ್ನ ಪರಿಮಿತಿಯೊಳಗೆ ಓದಿ ಋಷಿಪಟ್ಟಿದ್ದೇನೆ. ಇಂಗ್ಲಿಷ್ ಭಾಷೆಯಲ್ಲಿನ ಇಂಥ ಒಳ್ಳೆಯ ಬರಹಗಳನ್ನು ಓದಿದಾಗೆಲ್ಲಾ ಇವುಗಳನ್ನು ಕನ್ನಡಕ್ಕೆ ತಂದರೆ ಹೇಗೆ ಎನ್ನುವ ಆಸೆ ನನ್ನಲ್ಲಿ ಮೂಡುತ್ತದೆ' ಎಂದಿದ್ದಾರೆ.
©2024 Book Brahma Private Limited.