ಲೇಖಕ ಇಮಾಮ್ ಸಾಹೇಬ್ ಹಡಗಲಿ ಅವರ ಆಯ್ದ ಸಂಶೋಧನಾತ್ಮಕ ಬರಗಹಗಳ ಸಂಕಲನ-ಜಾನಪದ ಜತನ. ಜಾನಪದ ಸಾಹಿತ್ಯ ಮತ್ತು ಜನಪದ ಪ್ರದರ್ಶನಾತ್ಮಕ ಕಲೆಗಳ ಕುರಿತು ವೈವಿಧ್ಯಮಯ ದೃಷ್ಟಿಕೋನಗಳಿಂದ ಬರೆದ ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ಬಯಲಾಟ, ಸಾಂಸ್ಕೃತಿಕ ಸಂಕಥನ, ಪಶುಪಾಲನಾ ಪರಂಪರೆ, ಆಧುನಿಕ ವೃತ್ತಿ ರಂಗಭೂಮಿಯಲ್ಲಿ ಜಾನಪದ, ಜನಪದ ಸಾಹಿತ್ಯದಲ್ಲಿ ಹಾಸ್ಯ, ಒಂದು ಪರಿಸರದ ಜನಪದ ಪರಂಪರೆ ಹಾಗೂ ಸ್ಥಳನಾಮಗಳ ಕುರಿತ ಬರಹಗಳಿವೆ. ಜಾನಪದ ಸಾಹಿತ್ಯ ಮತ್ತು ಇತರೆ ಪ್ರಕಾರಗಳನ್ನು ಜತನವಾಗಿಸಿಕೊಂಡು ಬರುವುದೇ ಕೃತಿ ಉದ್ದೇಶವಾಗಿದೆ ಎಂದು ಸ್ವತಃ ಲೇಖಕರು ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
©2024 Book Brahma Private Limited.