ಹೇಳುತೇನೆ ಕೇಳು

Author : ಸುಕನ್ಯಾ ಕನಾರಳ್ಳಿ

Pages 260

₹ 175.00




Year of Publication: 2012
Published by: ಲಂಕೇಶ್ ಪ್ರಕಾಶನ
Address: ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನ ಗುಡಿ, ಬೆಂಗಳೂರು

Synopsys

ಹೇಳತೇನೆ ಕೇಳು ಸಂಕಲನದಲ್ಲಿ ಹೆಣ್ಣಿನ ಆತ್ಮಕಥನಕ್ಕೆ, ಕಥಾನಕಗಳಿವೆ ಸಂಬಂಧ ಪಟ್ಟ ಹಲವಾರು ಪ್ರಶ್ನೆಗಳ, ಜಿಜ್ಞಾಸೆಗಳ ಮೂರ್ತರೂಪ. ಅದಕ್ಕೆ ದೇಶ, ಭಾಷೆಗಳ ಮಿತಿಯಿಲ್ಲ. ಬಿನೋದಿನಿ ದಾಸಿ ಮತ್ತು ಹಂಸಾ ವಾಡಕರಳ ಬದುಕಿನ ಬವಣೆ ಮಾತ್ರ ಒಂದೇ ತೆರನಾಗಿತ್ತು. ಸುಪ್ರಸಿದ್ಧ ರಾಜಕಾರಣಿಯ ಪತ್ನಿಯಾಗಿದ್ದರೂ ಸಹ ತೆಹಮೀನಾ ದುರಾನಿ ಅನುಭವಿಸಿದ ಕೌಟುಂಬಿಕ ಹಿಂಸೆಗೆ ಸ್ಥಾನಮಾನದ ರಿಯಾಯತಿ ಇಲ್ಲ. ಅಂತರ್ಮುಖಿಯಾದ ಕಾರಣಕ್ಕೇ ಜೆಟೆಟ್ ಫ್ರೇಂ ಅನಗತ್ಯವಾಗಿ ಹನ್ನೆರಡು ವರ್ಷಗಳ ಮಟ್ಟಿಗೆ ಛಿದ್ರಮನಸ್ಕತೆಯ ಪಟ್ಟ ಹೊತ್ತಿದ್ದಳು. ಹದಿನೆಂಟು ವಯಸ್ಸಿನ ಸುಸಾನ ಕೇಸನ್ ಯಾವುದೋ ಸಣ್ಣ ಕಾರಣಕ್ಕೆ ವೈದ್ಯನಲ್ಲಿಗೆ ಹೋದಾಗ ಅವಳ ಮುಖದ ಮೇಲಿನ ಮೊಡವೆ ನೋಡಿ ಅವಳನ್ನು ಮಾನಸಿಕ ಆಸ್ಪತ್ರೆಗೆ ದೂಡಿದ್ದ. ವ್ಯವಸ್ಥೆಗೆ ಸೆಡ್ಡುಹೊಡೆದು ನಿಂತಿದ್ದ  ’ಹಿಪ್ಪಿ’ ಸಂಸ್ಕೃತಿಯನ್ನು ಬೇರು ಸಹಿತ ಕಿತ್ತೊಗೆಯುವ ಪ್ರತಿಜ್ಞೆ ಮಾಡಿದ್ದ ಮಹಾನ್ ವೈದ್ಯ! ಕಮಲಾದಾಸ್ ಅವರ ಆತ್ಮಕಥನಕ್ಕೆ ಪ್ರತಿಕ್ರಿಯೆಯಾಗಿ ಬಂದ ಹೀನಾಯಗಳೆಷ್ಟೋ! ಗ್ವಾಟೆಮಾಲಾದ ರಿಗೊಬೆರ್ತಾ ಮೆಂಚುಳ ಆತ್ಮಕಥನವನ್ನು ಅಲ್ಲಗಳೆಯಲು ಅಮೆರಿಕಾದ ವ್ಯವಸ್ಥೆಯೇ ಸಂಚು ಹೂಡಿತ್ತು. ತಸ್ಲಿಮಾ ತನ್ನ ಕಥೆಯನ್ನು ನಿರೂಪಿಸಿದ್ದಕ್ಕೆ ಸಿಕ್ಕದ್ದು ಫತ್ವಾ ಬಹುಮಾನಗಳು! ಆತ್ಮಕಥನ ದುರ್ಘಟನೆಯಿಂದಲೇ ಪ್ರಾರಂಭವಾಗಲಿ ಎಂದು ವಿಭಾ ಮಿಶ್ರಾ ಪ್ರಕರಣವನ್ನು ಮೊದಲು ಆಯ್ದುಕೊಳ್ಳುವ ಪ್ರೇಮಾ ಕಾರಂತ..

 

ಹದಿನೆಂಟು ಮಹತ್ವದ ಮಹಿಳೆಯರ ಆತ್ಮಕತೆಯ ಸಣ್ಣ ತುಣುಕುಗಳು ಇದರಲ್ಲಿವೆ. ಕೇವಲ ಕನ್ನಡದವರಷ್ಟೇ ಅಲ್ಲದೆ ಬೇರೆ ದೇಶ, ಬೇರೆ ಭಾಷೆಯವರು ಬರಹಗಳೂ ಕೂಡ ಇಲ್ಲಿ ಇವೆ. ಸುಕನ್ಯಾ ಕನಾರಳ್ಳಿಯವರು ಬೇರೆ ಭಾಷೆಯ ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವುದರ ಮೂಲಕ ಕನ್ನಡದ ಓದುಗರಿಗೆ ಒಳ್ಳೆಯ ಕೃತಿಯನ್ನು ಕೊಟ್ಟಿದ್ದಾರೆ.

About the Author

ಸುಕನ್ಯಾ ಕನಾರಳ್ಳಿ

ಕೊಡಗಿನಲ್ಲಿ ಜನಿಸಿದ ಸುಕನ್ಯಾ ಅವರು ವಿಜ್ಞಾನದಲ್ಲಿ ಪದವಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್ ಪಡೆದಿದ್ದಾರೆ. ಅನುವಾದ, ಮಹಿಳಾ ಸಾಹಿತ್ಯ, ಸಂಶೋಧನೆಯಲ್ಲಿ ಆಸಕ್ತಿ. ’ಅಲ್ಲಿಂದ ಇಲ್ಲಿಗೇ ಅವಳ ಕಥೆಗಳು’, ಅರುಂಧತಿ ರಾಯ್ ಅವರ ’ಡಿಸೆಂಬರ್‍ 13’, ಮಿಡತೆಗಳ ಬರವಿಗೆ ಕಿವಿಗೊಡುತ್ತಾ’ ಜೊತೆಗೆ ಮಿಲನ್ ಕುಂದೇರಾನ ಕಾದಂಬರಿ ’ಹೊರಲಾರದ ಗಾಳಿ ಭಾರ’ ಕನಾರಳ್ಳಿ ಅವರು ಅನುವಾದಿಸಿದ ಕೃತಿಗಳು. ವೈದೇಹಿ ಅವರ ಆಯ್ದ ಕತೆಗಳ ಇಂಗ್ಲಿಷ್ ಅನುವಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಕನಾರಳ್ಳಿಯವರ ಹಲವು ಕಥೆ, ಅನುವಾದ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ನ್ಯೂಜಿಲೆಂಡ್ ನಲ್ಲಿ ಇಂಗ್ಲಿಷ್ ಅಧ್ಯಾಪಿಕೆಯಾಗಿದ್ದಾರೆ. ...

READ MORE

Related Books