ಕನ್ನಡದ ಒಳಗೆ ಏನು ನಡೆಯುತ್ತಿದೆ ಎಂಬಷ್ಟೇ ಮುಖ್ಯವಾದುದು ಕನ್ನಡದ ಹೊರಗೆ ಏನು ಸಂಭವಿಸುತ್ತಿದೆ ಅಥವಾ ಸಂಭವಿಸಿದೆ ಎಂಬುದಾಗಿದೆ. ಚಿಂತಕರು ಬರಹಗಾರರು ಕಾಲಕಾಲಕ್ಕೆ ಹಾಗೆ ’ಬಾಹ್ಯ’ ಸಂಗತಿಗಳನ್ನು ಧ್ಯಾನಿಸುತ್ತಿರುತ್ತಾರೆ. ಹಿರಿಯ ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಅಂತಹ ಧ್ಯಾನಿ.
ಶೀರ್ಷಿಕೆಯಿಂದಲೇ ಗಮನ ಸೆಳೆಯುವ ’ಹತ್ತು ದಿಕ್ಕಿನ ಬೆಳಕು’ ಜೀನ್ ಪಾಲ್ ಸಾರ್ತ್, ರಾಮ ಮನೋಹರ ಲೋಹಿಯಾ, ಫ್ಯಾನ್ಸ್ ಮಾಸ್ ಎಂಕೆನ್ಸ್ ಬರ್ಗರ್, ಸೂಸಿ ಫಾರು ಮತ್ತು ಕೆ. ಲಲಿತಾ ಅವರ ಚಿಂತನ ಬರಹಗಳ ಕನ್ನಡ ಅನುವಾದ. ವೈಚಾರಿಕ ವಾಗ್ವಾದ, ಮಾಧ್ಯಮ ಕೈಗಾರಿಕೆ, ಲಿಂಗ ತಾರತಮ್ಯ, ಮುಂತಾದ ವಿಚಾರಗಳು ಕೃತಿಯಲ್ಲಿ ಸ್ಥಾನ ಪಡೆದಿವೆ.
©2024 Book Brahma Private Limited.