‘ಹಾಲಕ್ಕಿ ಒಕ್ಕಲಿಗರು: ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬುದು ಲೇಖಕ ಎನ್.ಆರ್. ನಾಯಕ ಅವರ ಸಂಶೋಧನಾ ಕೃತಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ ಒಕ್ಕಲಿಗರ ಸಂಖ್ಯೆ ಹೆಚ್ಚು. ಅವರ ಆಚಾರ ವಿಚಾರಗಳು ವಿಭಿನ್ನ. ಸಾಂಸ್ಕೃತಿಕ ಅಧ್ಯಯನಕ್ಕೆ ಈ ಜನಾಂಗೀಯ ಆಚರಣೆಗಳು ಪೂರಕ ಸಾಮಗ್ರಿ ಒದಗಿಸುತ್ತವೆ. ಉತ್ತರ ಕನ್ನಡ ಜಿಲ್ಲೆಯ ಕಾಡು ಅಥವಾ ಕರಾವಳಿಯುದ್ದಕ್ಕೂ ಇರುವ ಹಾಲಕ್ಕಿ ಒಕ್ಕಲಿಗರು, ಪ್ರಮುಖವಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಇವರ ಸಾಂಸ್ಕೃತಿಕ ಆಯಾಮಗಳನ್ನು ಅಧ್ಯಯನಕ್ಕೆ ಒಳಪಡಿಸಿದ ಕೃತಿ ಇದು.
©2024 Book Brahma Private Limited.