ಗಾಂಪರ ಮಠದಲ್ಲಿ ಕಳ್ಳತನ

Author : ವಿ.ಎಸ್.ಎಸ್. ಶಾಸ್ತ್ರಿ

Pages 67

₹ 30.00




Year of Publication: 2001
Published by: ಸುಭಾಷ್‌ ಪಬ್ಲಿಷಿಂಗ್‌ ಹೌಸ್‌
Address: ಬೆಂಗಳೂರು

Synopsys

‘ಗಾಂಪರ ಮಠದಲ್ಲಿ ಕಳ್ಳತನ’ ವಿ.ಎಸ್‌. ಎಸ್‌. ಶಾಸ್ತ್ರಿ ಅವರ ಅನುವಾದಿತ ಕೃತಿಯಾಗಿದೆ. ಕಥೆ ಹೇಳುತ್ತಲೆ ಗಣಿತ ವಿಜ್ಞಾನವನ್ನು ಮಕ್ಕಳಿಗೆ ಕುತೂಹಲವನ್ನು ಮೂಡಿಸುವಂತಹ ಕೃತಿಯಾಗಿದೆ.

About the Author

ವಿ.ಎಸ್.ಎಸ್. ಶಾಸ್ತ್ರಿ

ಒರಿಗಾಮಿ ಗಣಿತದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ವಿ.ಎಸ್.ಎಸ್. ಶಾಸ್ತ್ರಿ ಒಬ್ಬರು. ನವಕರ್ನಾಟಕದ ಗಣಿತ ಸಂವತ್ಸರ ಮಾಲೆಯ ಸಂಪಾದಕರ ಪೈಕಿ ಇವರೂ ಒಬ್ಬರು.  ಗಣಿತ ಮತ್ತು ವಿಜ್ಞಾನ ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ. ಅರವಿಂದ ಗುಪ್ತ ಅವರ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗಣಿತ ಚಟುವಟಿಕೆಗಳು, ಆಹಾ ಎಷ್ಟೊಂದು ಚಟುವಟಿಕೆಗಳು, ಸೌರಶಕ್ತಿಯ ಕತೆ, ತ್ಯಾಜ್ಯವಸ್ತುಗಳಿಂದ ವಿಜ್ಞಾನ-ಆಟಿಕೆಗಳು ಮುಂತಾದವು ಪ್ರಮುಖ ಕೃತಿಗಳು. ಇವರಿಗೆ ವಿಜ್ಞಾನ ಸಂವಹನಕಾರ ಪ್ರಶಸ್ತಿಯು ಲಭಿಸಿದೆ.  ...

READ MORE

Reviews

ಹೊಸತು-ಡಿಸೆಂಬರ್‌-2001

ಕಥೆ ಹೇಳುತ್ತಲೇ ಗಣಿತ-ವಿಜ್ಞಾನವನ್ನು ಮಕ್ಕಳಿಗೆ ಸಹ್ಯವಾಗುವಂತೆ ಅವರಲ್ಲಿ ಕುತೂಹಲ ಉಂಟಾಗುವಂತೆ ವಿವರಿಸುವ ವಿಸ್ಮಯ ವಿಜ್ಞಾನ ಮಾಲಿಕೆಯ ಈ ಪುಸ್ತಕ ಮಕ್ಕಳಿಗೆ ಓದುವ ಹವ್ಯಾಸವನ್ನು ಬೆಳೆಸುವತ್ತ ಪ್ರಯತ್ನಿಸಿದೆ. ಒತ್ತಾಯದ ಓದನ್ನು ಹೇರುತ್ತ. ಅವರ ಆಸಕ್ತಿ ಕಡಿಮೆ ಗೊಳಿಸುವ ಇಂದಿನ ದಿನಗಳಲ್ಲಿ ಮನರಂಜನೆ ಮೂಲಕ ಪಾಠ ಕಲಿಯಲು ನೆರವಾಗಬಲ್ಲುದು. ಮಕ್ಕಳ ಅಮೂಲ್ಯ ಸಮಯವನ್ನು ಒಂದಿಷ್ಟೂ ಹಾಳು ಮಾಡದೆ ಕಲಿಸುವ ಉತ್ತಮ ಶೈಲಿಯ ನಿರೂಪಣೆ.

Related Books