`ಚಲನಚಿತ್ರದ ಸ್ವರೂಪ, ವಿಮರ್ಶೆ’ ಕೃತಿಯು ಕೆ.ವಿ ಸುಬ್ಬಣ್ಣ ಅವರ ಅನುವಾದಿತ ಕೃತಿಯಾಗಿದೆ. ಕೃತಿಯ ಮೂಲ ಕರ್ತೃ ಸತೀಶ್ ಬಹಾದುರ್. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಚಲನಚಿತ್ರದಲ್ಲಿ, ಯಾವುದೊಂದು ಘಟನೆಯ ರೂಪ(ಬಿಂಬ)ವನ್ನು, ಪ್ರೇಕ್ಷಕನ ಗ್ರಹಿಕೆಗಾಗಿ, ನಾವು ಸೃಷ್ಟಿಸಿಕೊಡುತ್ತೇವೆ. ತೆರೆಯಮೇಲೆ ಕಾಣುವ ಘಟನೆ. ಕೇವಲ ಗ್ರಹಿಕೆಗಾಗಿ ಇರುವಂಥದು. ನಿಜಘಟನೆಗಳು ‘ನಿಜಕಾಲದಲ್ಲಿ’ ‘ನಿಜದೇಶ’ದಲ್ಲಿ (ಭೌತಶಾಸ್ತ್ರೀಯವಾದ ನಿಜಕಾಲ ದೇಶಗಳಲ್ಲಿ) ಸಂಭವಿಸುತ್ತವೆ. ಚಿತ್ರಘಟನೆ ಅಸ್ತಿತ್ವ ‘ಚಿತ್ರಕಾಲ’ ದಲ್ಲಿ ‘ಚಿತ್ರ ದೇಶ’ ದಲ್ಲಿ. ನಿಜಘಟನೆಗೂ ತೆರೆಯಮೇಲೆ ಸೃಷ್ಟಿಗೊಂಡ ಗುಣೀಭೂತ ಘಟನೆಗೂ ನಡುವೆ ಇರುವ ಸಂಬಂಧ ಇದು : ನಿಜಘಟನೆಗೆ ಅರ್ಥವಂತಿಕೆಯ ಆಂತರಿಕ ರೂಪಹೊಂದಿದೆ. ಅದನ್ನು ಚಿತ್ರನಿರ್ಮಾಪಕ ಅರ್ಥಮಾಡಿಕೊಳ್ಳುತ್ತಾನೆ. ಅಥವಾ ಅನುಭವಿಸಿಕೊಳ್ಳುತ್ತಾನೆ. ಆ ಅರ್ಥವಂತಿಕೆಯನ್ನು ಅಭಿವ್ಯಕ್ತಗೊಳಿಸಬಲ್ಲ ಚಿತ್ರರೂಪವಾಗಿ ಸಂಕಲಿಸುತ್ತಾನೆ. ನಿಜಘಟನೆಯ ಆಂತರಿಕ ರಚನೆ ಏನದೆಯೋ ಅದು, ಚಿತ್ರ ಘಟನೆಯ ಆಂತರಿಕ ರಚನೆಯ ಮೂಲವಾಗಿ ಅಭಿವ್ಯಕ್ತಿಗೊಳಿಸಬೇಕು. ಈ ಕಾರಣದಿಂದಲೇ, ಒಂದು ಒಳ್ಳೆಯ ಚಲನಚಿತ್ರದಲ್ಲಿ ಪ್ರೇಕ್ಷಕ, ಅಲ್ಲಿ ಒಂದು ನಿರ್ದಿಷ್ಟ ಕ್ರಮದಲ್ಲಿ ಸಂಕಲಿತವಾದ ಚಿತ್ರದ ತುಣುಕು-ಧ್ವನಿಯ ತುಣುಕುಗಳನ್ನು ತೆರೆಯಮೇಲೆ ನೋಡಿದ ಮಾತ್ರಕ್ಕೇ, ಅಂಥ ಚಿತ್ರರೂಪದ ಮುಖಾಂತರ, ನಿಜಘಟನೆಯ ಪೂರ್ಣಾನುಭವನ್ನು ಪಡೆಯಲು ಶಕ್ತನಾಗುತ್ತಾನೆ. ಒಂದು ಚಿತ್ರಕ್ಕೆ ಹೇಗೆ ಚಿತ್ರಲೇಖನ ಬರೆದುಕೊಳ್ಳಬೇಕು ಎಂಬುದರ ರಹಸ್ಯ ಕೂಡ ಇದರಲ್ಲಿ ಅಡಕವಾಗಿದೆ.
©2024 Book Brahma Private Limited.