ಬುದ್ದ ಪ್ರಜ್ಞೆಯ ನಡಿಗೆ ಸುಭಾಷ್ ರಾಜಮನೆ ಅವರ ಕೃತಿಯಾಗಿದೆ. ಬುದ್ಧನ ಧ್ಯಾನಮಾರ್ಗದ ದೀಪ್ತಿಯಲ್ಲಿ ಬೆಳಗಿದ ವಿಯೆಟ್ನಾಂನ ಈ ಬೌದ್ಧ ಗುರು ತಿಚ್ ನ್ಹಾತ್ ಹಾನ್ ಅವರು ಶಾಂತಿ, ಕರುಣೆ ಹಾಗೂ ಪ್ರೀತಿಯಲ್ಲಿ ಉಸಿರಾಡುತ್ತ ಅದನ್ನು ಯುದ್ಧದ ಭಾಗವಾದ ಸೈನಿಕರಲ್ಲಿ ಬಿತ್ತಿ ಸ್ನೇಹದ ಫಲ ಪಡೆದವರು. ಬುದ್ಧನ ‘ಆನ ಪಾನ ಸತಿ’ಯ ಉಸಿರನ್ನೇ ಗಮನಿಸುವ ಧ್ಯಾನ ಒಂದು ವಿಶಿಷ್ಟ ಮನೋಮಗ್ನತೆ. ಅದರ ಸಾಕಾರ ರೂಪ ಈ ಸಂತ. ವೈರ, ದ್ವೇಷ, ಅಸೂಯೆರಹಿತ ಬದುಕಿಗೆ ಪ್ರತಿ ಮನುಷ್ಯರನ್ನು ಕೊಂಡೊಯ್ಯುವ ನಿಧಾನ ನಡಿಗೆಯ, ಶಾಂತ ಚಿತ್ತದ, ಮನದ ಅನುಸಂಧಾನದಲ್ಲಿ ತನ್ನ ಒಳಗನ್ನು ಶೋಧಿಸಿಕೊಳ್ಳುತ್ತ ಶುದ್ಧನಾದ ಯೋಗಿ ಈತ. ಈ ಗುರುವಿನ ಅಮೂಲ್ಯ ಚಿಂತನೆಗಳನ್ನು ಗೆಳೆಯ ಡಾ. ಸುಭಾಷ್ ರಾಜಮಾನೆ ಕನ್ನಡಕ್ಕೆ ಅನುವಾದಿಸಿ, ಕನ್ನಡಿಗರು ಬುದ್ಧನ ಧ್ಯಾನಮಾರ್ಗದಲ್ಲಿ ಸಾಗಲು ಸಹಾಯಕರಾಗಿದ್ದಾರೆ. ಇಂತಹ ಕೃತಿ ಕನ್ನಡಿಗರ ಶಾಂತಿ, ಸಹನೆ, ಪ್ರೀತಿಯ ಬದುಕನ್ನು ವೃದ್ಧಿಸುತ್ತದೆ ಎಂದು ಡಾ. ಜಿ. ಕೃಷ್ಣಪ್ಪ ಅವರು ಕೃತಿಯ ಬಗ್ಗೆ ತಿಳಿಸಿದ್ದಾರೆ.
©2024 Book Brahma Private Limited.