ಲೇಖಕ ಬಿ. ಸುಜ್ಞಾನಮೂರ್ತಿ ಅವರ ಅನುವಾದಿತ ಕೃತಿ ಭ್ರಮೆಯ ಭವಿಷ್ಯ. ಧರ್ಮದ ಬಗ್ಗೆ ಮನೋವಿಶ್ಲೇಷಣೆ ಎಂಬ ಉಪಶೀರ್ಷಿಕೆ ಈ ಕೃತಿಗಿದೆ. ಮನಸ್ಸಿನಲ್ಲಿ ಕಾಮವಾಂಛೆಗಳೊಂದಿಗೆ ಹಣ್ಣುಗಾಯಿ ನೀರುಗಾಯಿಯಾಗುವ ವ್ಯಕ್ತಿ ಆ ಬಯಕೆಗಳ ಉದಾತ್ತೀಕರಣದ ಮೂಲಕ ಪರಮಭಕ್ತನಾಗಿ ಪೂಜೆ ಪುನಸ್ಕಾರಗಳಲ್ಲಿ ಸದಾ ಮುಳುಗಿ ತೇಲಬಹುದು. ತನ್ನನ್ನು ತಾನು ಅಲ್ಪನಾಗಿ ಕೈಯಲ್ಲಾಗದದವನಂತೆ ಭಾವಿಸುವ ಇತರರ ಮೇಲೆ ಅಧಿಕಾರ ಚಲಾಯಿಸಬಹುದು. ನಮ್ಮ ಮಾನಸಿಕ ಸ್ವರೂಪವನ್ನು ಫಾಯ್ಡ್ ಒಂದು ಮಂಜಿನಗಡ್ಡೆಯಂತೆ ಎಂದು ಬಣ್ಣಿಸಿದ್ದಾನೆ. ಈ ಕುರಿತು ಅನೇಕ ಲೇಖನಗಳು ಈ ಕೃತಿಯಲ್ಲಿದೆ.
©2024 Book Brahma Private Limited.