ಸಾಹಿತಿ ಬಿ.ಜನಾರ್ದನ ಭಟ್ ಅವರ ಕೃತಿ ಭಾಷಾಂತರ ಅಧ್ಯಯನ ಒಂದು ಪ್ರವೇಶಿಕೆ. ಸಾಹಿತ್ಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಟ್ರಾನ್ಸ್ಲೇಷನ್ ಸ್ಟಡೀಸ್ ಎಂಬ ವಿಷಯದ ಕುರಿತಾಗಿರುವ ಗ್ರಂಥ ಇದು. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಎಂ.ಎ. ವಿದ್ಯಾರ್ಥಿಗಳಿಗೆ ನೀಡಿದ ಉಪನ್ಯಾಸದ ವಿಸ್ತೃತ ರೂಪ.
ಡಾ. ಅಜಕ್ಕಳ ಗಿರೀಶ್ ಭಟ್ ಅವರು ಈ ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.ಅವರು ಹೇಳುವಂತೆ, ಉತ್ತಮ ಭಾಷಾಂತರ ಯಾವುದು ಮತ್ತು ಯಾಕೆ ಇತ್ಯಾದಿ ಚರ್ಚೆಗಳು ಮಾದರಿಗಳ ಸಹಿತ ಇನ್ನಷ್ಟು ಆಗಬೇಕಿದೆ. ಪದ್ಯ, ಗದ್ಯ, ಮತ್ತಿತರ ಸಾಹಿತ್ಯ ಪ್ರಕಾರಗಳ ಭಾಷಾಂತರ ಪ್ರಕ್ರಿಯೆಗಳಲ್ಲಿ ಇರಬಹುದಾದ ವ್ಯತ್ಯಾಸಗಳೇನು ಎಂಬಂತಹ ವಿಶ್ಲೇಷಣೆಗಳೂ ಆಗಬೇಕು. ಡಾ.ಬಿ.ಜನಾರ್ದನ ಭಟ್ ಅವರು ವಿಮರ್ಶಕರಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ಅನುವಾದಕರಾಗಿ, ಹಲವು ಉತ್ತಮ ಸಂಕಲನಗಳ ಸಂಪಾದಕರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಚೆನ್ನಾಗಿ ಪರಿಚಿತರೇ ಆಗಿದ್ದಾರೆ. ಸಾಹಿತ್ಯದ ಕ್ಷೇತ್ರದಲ್ಲಿ ಅವರಿಗಿರುವ ಅಪಾರ ಅನುಭವ, ಅವರ ವಿಸ್ತಾರವಾದ ಓದು, ಬೋಧನೆಯ ಅನುಭವ ಇವೆಲ್ಲ ಈ ಕೃತಿಯ ಮೌಲ್ಯ ಹೆಚ್ಚುವಲ್ಲಿ ಕಾರಣವಾಗಿವೆ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.