ಪ್ರಖರ ರಾಜಕೀಯ ಪ್ರಜ್ಞೆ, ಮತ್ತು ಕಾವ್ಯಾತ್ಮಕ ಬರವಣಿಗೆಗೆ ಖ್ಯಾತನಾದ ಎಡುವರ್ಡೊ ಗೆಲಿಯಾನೋ ರಚಿಸಿದ ಮೆಮೊರಿ ಆಫ್ ಫೈರ್ ಕೃತಿಯ ಕನ್ನಡಾನುವಾದವನ್ನು ಅನುವಾದಕ, ಬರಹಗಾರ ಕೆ. ಪಿ ಸುರೇಶ್ ’ಬೆಂಕಿಯ ನೆನಪು’ ಎಂಬ ಶೀರ್ಷಿಕೆಯಡಿ ತಂದಿದ್ಧಾರೆ.
1973 ರಲ್ಲಿ ಉರುಗ್ವೆಯಲ್ಲಿ ಬಲಪಂಥೀಯ ಸೈನಿಕ ಸರ್ವಾಧಿಕಾರ ಬಂದಾಗ ಗೆಲಿಯಾನೋ ದೇಶ ಬಿಡಬೇಕಾದ ಸಂದರ್ಭ ಒದಗಿತು. ಅರ್ಜೈಂಟೈನಾ ಸ್ಪೇನ್ ದೇಶಗಳಲ್ಲಿ ದೇಶಾಂತರ ಅನುಭವಿಸುತ್ತಿದ್ದ ವೇಳೆಯಲ್ಲಿ ಗೆಲಿಯಾನೋ ’ಮೆಮೊರಿ ಆಫ್ ಫೈರ್’ ಕೃತಿಯನ್ನು ರಚಿಸಿದ.
ಈ ಕೃತಿಗೆ 1989 ರಲ್ಲಿ ಎಡುವರ್ಡೊ ಗೆಲಿಯಾನೋ ಅಮೆರಿಕಾದ ’ವರ್ಷದ ಶ್ರೇಷ್ಠ ಕೃತಿ’ ಪ್ರಶಸ್ತಿಯನ್ನು ಪಡೆದುಕೊಂಡನು. ಮತ್ತು ಈ ಕೃತಿಯ ಅನುವಾದ ಕಾರ್ಯಕ್ಕಾಗಿ ಲೇಖಕ ಕೆ.ಪಿ ಸುರೇಶ್ ಅವರಿಗೆ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.
©2024 Book Brahma Private Limited.