ಅಶ್ವತ್ಥಾಮ ಪಿ.ವಿ ನಾರಾಯಣ ಅವರ ಕೃತಿಯಾಗಿದೆ. 'ಅಶ್ವತ್ಥಾಮನ್' ನಾಟಕದಲ್ಲಿ ಶ್ರೀಯವರು ಬಳಸುವ ಹಳಗನ್ನಡದ ಬಗ್ಗೆ ಒಂದೆರಡು ಮಾತು. ಅವರ ಸಂಭಾಷಣಾ ರಚನೆ ತುಂಬ ಬಿಗಿಯಾದದ್ದು, ಪದಗಳ ಜೋಡಣೆ ಅಚ್ಚುಕಟ್ಟಾದದ್ದು ಎಂಬುದರಲ್ಲಿ ಎರಡುಮಾತಿಲ್ಲ. ಆದರೆ ಹಳಗನ್ನಡ ಬೇಕಾಗಿತ್ತೇ ? 'ಇಂಗ್ಲೀಷ್ ಗೀತ'ಗಳಲ್ಲಿನ ಅತ್ಯುತ್ತಮ ರಚನೆಗಳು ಸರಳವಾದ ಹೊಸಗನ್ನಡವಾಗಿದ್ದರೂ, ಅವರ ನಾಟಕಗಳ ಭಾಷೆ ಹಾಗೂ ಸ್ವತಂತ್ರ ರಚನೆಗಳ ಭಾಷೆ ಹಳಗನ್ನಡವಾಗಲು ವಿಶೇಷ ಕಾರಣಗಳಿವೆಯೇ ? ಕನ್ನಡ ಸಾಹಿತ್ಯದ ಆಧುನಿಕತ್ವಕ್ಕೆ ಹೆಣಗಿದ ಶ್ರೀ ನಾಟಕಗಳ ಭಾಷೆಯನ್ನು ಮಾತ್ರ ಏಕೆ ಹಳಗನ್ನಡ ವಾಗಿಸುತ್ತಾರೆ? 'ಗದಾಯುದ್ಧ'ದ ಪ್ರಭಾವದಿಂದ, ಅದನ್ನು ನಾಟಕರೂಪಕ್ಕಿಳಿಸು ವಾಗ ಪಡೆದ ಅನುಭವದಿಂದ ಇನ್ನೆರಡು ನಾಟಕಗಳಲ್ಲಿಯೂ ಹಳಗನ್ನಡ ಬಳಸಿದರೇ ? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ನಾಟಕದ ವಸ್ತು ಸಮಕಾಲೀನವಾಗಿರದುದರಿಂದ, ಹಳಗನ್ನಡವು ದೂರ ವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, ದುರಂತ ನಾಟಕದ ಗಾಂಭೀರ್ಯಕ್ಕೆ ಹೊಸಗನ್ನಡಕ್ಕಿಂತಲೂ ಹಳಗನ್ನಡವೇ ಹೆಚ್ಚು ಸೂಕ್ತವಾದುದು .
©2024 Book Brahma Private Limited.