ಅನುಭವದ ಅಮೃತತ್ವ

Author : ಆನಂದ ಋಗ್ವೇದಿ

Pages 120

₹ 125.00




Year of Publication: 2015
Published by: ಕನ್ನಡ ಸಾಹಿತ್ಯ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002

Synopsys

ಲೇಖಕ ಡಾ. ಅನಂದ ಋಗ್ವೇದಿ ಅವರ ಸಂಶೋಧನಾ ಅಧ್ಯಯನ ಕೃತಿ ‘ಅನುಭವದ ಅಮೃತತ್ವ’. ಕವಿ ಮಹಾಲಿಂಗರಂಗರ ‘ಅನುಭವಾಮೃತ ಕಾವ್ಯ ಮತ್ತು ಅವಧೂತ ಅದ್ವೈತ ಪರಂಪರೆಯ ದಾರ್ಶನಿಕತೆ: ಒಂದು ಅಧ್ಯಯನ’ ಕೃತಿ ಇದು. ಅಕಾಡೆಮಿ ಅಧ್ಯಕ್ಷ ಮಾಲತಿ ಪಟ್ಟಣಶೆಟ್ಟಿ ಕೃತಿಗೆ ಬೆನ್ನುಡಿ ಬರೆದು ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಉಳಿದೆಲ್ಲ ಪ್ರಕಾರಗಳು ಸಮೃದ್ಧವಾಗಿ ಬೆಳೆದಿದ್ದು, ಸಂಶೋಧನಾತ್ಮಕ ಕೃತಿಗಳ ಕೊರತೆ ಸಮಗ್ರ ಸಾಹಿತ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಇದನ್ನು ಅನುಲಕ್ಷಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ತಜ್ಞರಿಂದ ಸಂಶೋಧನಾ ಸಂಪ್ರಬಂಧಗಳ ಬರವಣಿಗೆ ಮಾಡಿದ್ದರ ಫಲವೇ ಈ ಸರಣಿ ಸಂಪ್ರಬಂಧಗಳ ಪ್ರಕಟಣೆ. ಆ ಪೈಕಿ ‘ ಅನುಭವದ ಅಮೃತತ್ವ’ ಕೃತಿ

About the Author

ಆನಂದ ಋಗ್ವೇದಿ
(24 May 1974)

ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ-  ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.  ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ.  ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...

READ MORE

Related Books