ತೆಲುಗು ಭಾಷಾ ಲೇಖಕ ಜಿ.ವಿ.ರತ್ನಾಕರ್ ಅವರ ಕೃತಿಯನ್ನು ಕನ್ನಡದ ಲೇಖಕ ಹಾಗೂ ಅನುವಾದಕ ಲಕ್ಕೂರು ಆನಂದ ಅವರ ಅನುವಾದಿಸಿದ್ದು ‘ಅಂಬೇಡ್ಕರ್ ಕಂಡ ಭಾರತ’ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಆಧುನಕತೆಯ ತಾತ್ವಿಕ ನೆಲೆಗಳು ಹಾಗೂ ವರ್ತಮಾನದ ತಲ್ಲಣಗಳು ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಪ್ರೊ.ಎಚ್.ಟಿ.ಪೋತೆ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯನ್ನು ಅಂಬೇಡ್ಕರ್ ಕಂಡ ಭಾರತ ಹಾಗೂ ಅಂಬೇಡ್ಕರ್ ನಂತರದ ಭಾರತ ಎಂಬುದಾಗಿ ಎರಡು ಭಾಗವಾಗಿ ವಿಂಗಡಿಸಿದ್ದು, ಮೊದಲ ಭಾಗದಲ್ಲಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್, ಡಾ. ಅಂಬೇಡ್ಕರ್ ಸೌತ್ ಭರೋ ಕಮಿಟಿ, ಅಸ್ಪೃಷ್ಯ ಕುಲಗಳು ಐಕ್ಯತೆ, ಆರ್ಥಿಕ ಶಾಸ್ತ್ರದ ಪ್ರೊಫೆಸರ್ ಡಾ. ಅಂಬೇಡ್ಕರ್, ಗುಲಾಮತನ:ಅಸ್ಪೃಶ್ಯತೆ, ಡಾ. ಅಮಬೇಡ್ಕರ್ : ಬಹಿಷ್ಕೃತ ಹಿತಕಾರಿಣಿ ಸಭೆ ಸೇರಿದಂತೆ ಅನೇಕ ಶೀರ್ಷಿಕೆಗಳಿವೆ..ಎರಡನೇ ಭಾಗದಲ್ಲಿ ಅಂಬೇಡ್ಕರ್ ಕುರಿತು ದೇವಿದಯಾಲ್, ಬಾಬಾ ಸಾಹೆಬ್ ವಸ್ತ್ರಧಾರಣೆ, ಬಾಬಾ ಸಾಹೇಬ್ ಅಲ್ಪಾಹಾರ, ಬಾಬಾ ಸಾಹೇಬರ ಸಮಾಚಾರ ಶೇಖರಣೆ, ನಿಯಮಬದ್ಧವಾದಂತಹ ಜೀವನ, ಡಾ. ಅಂಬೇಡ್ಕರ್ ಭೋಜನ, ಬಾಬಾ ಸಾಹೇಬ್ ವಿಶ್ರಾಂತಿ ಸೇರಿದಂತೆ ಅನೇಕ ಶೀರ್ಷಿಕೆಗಳ ಬರಹಗಳಿವೆ.
©2024 Book Brahma Private Limited.