ಅಭ್ಯಾಸ ಬಲ ಕೃತಿಯು ಚಾಲ್ಸ್ ಡುಹಿಗ್ ಅವರ THE POWER OF HABIT ಇಂಗ್ಲೀಷ್ ಕೃತಿಯ ಅನುವಾದವಾಗಿದೆ. ಶಿವನಂದ ಬೇಕಲ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಳೆದ ಒಂದು ದಶಕದಲ್ಲಿ ಅಭ್ಯಾಸಗಳ ನ್ಯೂರೋಲಜಿ ಮತ್ತು ಮನೋವಿಜ್ಞಾನದಲ್ಲಿ ನಮ್ಮ ತಿಳುವಳಿಕೆ ಎಷ್ಟು ಮುಂದುವರಿದಿದೆ ಎಂದರೆ, ಸಮಾಜದಲ್ಲಿ, ನಮ್ಮ ಜೀವನದಲ್ಲಿ, ಸಂಘಟನೆಗಳಲ್ಲಿ ಪ್ಯಾಟರ್ನ್‌ಗಳು ಹೇಗೆ ಕೆಲಸ ಮಾಡುತ್ತವೆ, ಅದರ ತಿಳುವಳಿಕೆ ಎಷ್ಟು ಚೆನ್ನಾಗಿ ನಡೆದಿದೆ ಎಂದರೆ ಐವತ್ತು ವರ್ಷಗಳ ಹಿಂದೆ ನಾವು ಇದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಅಭ್ಯಾಸಗಳು ಹೇಗೆ ಉಂಟಾಗುತ್ತವೆ, ಹೇಗೆ ಬದಲಾಗುತ್ತವೆ ಮತ್ತು ಅದರ ಹಿಂದಿನ ವಿಜ್ಞಾನವೇನು ಎಂಬುದನ್ನು ನಾವಿಂದು ತಿಳಿದಿದ್ದೇವೆ. ಅಭ್ಯಾಸಗಳನ್ನು ಮುರಿಯುತ್ತಾ ಮತ್ತೆ ಅವನ್ನು ನಮ್ಮ ಅವಶ್ಯಕತೆಗೆ ಅನುಸಾರವಾಗಿ ಹೇಗೆ ನಿರ್ಮಿಸಬೇಕೆಂಬುದು ನಮಗಿಂದು ತಿಳಿದಿದೆ. ಜನರು ಆಹಾರವನ್ನು ಕಡಿಮೆ ಸೇವಿಸುವಂತೆ, ನಿಯಮಿತವಾಗಿ ವ್ಯಾಯಾಮ ಮಾಡುವಂತೆ ಮತ್ತು ನಿಯಮಿತವಾಗಿ ದುಡಿಯುತ್ತ ಒಂದು ಸ್ವಸ್ಥ ಜೀವನವನ್ನು ನಿರ್ವಹಿಸುವಂತೆ ಹೇಗೆ ಮಾಡುವುದು ಎಂಬುದು ನಮಗಿಂದು ತಿಳಿದಿದೆ. ಆದಾಗ್ಯೂ, ಅಭ್ಯಾಸಗಳನ್ನು ಬದಲಿಸುವುದು ಸುಲಭವಲ್ಲ ಮತ್ತು ಅವನ್ನು ತಕ್ಷಣ ಬದಲಿಸಲೂ ಆಗುವುದಿಲ್ಲ.ಆದರೆ ಅಭ್ಯಾಸಗಳನ್ನು ನಾವು ಬದಲಿಸಲು ಸಾಧ್ಯವಿದೆ ಮತ್ತು ಅವನ್ನು ಹೇಗೆ ಬದಲಾಯಿಸುವುದು ಎಂಬುದು ನಮಗೀಗ ತಿಳಿದಿದೆ ಎಂದು ಪುಸ್ತಕದ ಬಗ್ಗೆ ಲೇಖಕ ಚಾಲ್ಸ್ ಡುಹಿಗ್ ತಿಳಿಸಿದ್ದಾರೆ.
©2024 Book Brahma Private Limited.