ಸಂಶೋಧಕರು, ಸಾಹಿತಿ, ಭಾಷಾ ತಜ್ಞ, ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಜಿ. ಅಶ್ವತ್ಥನಾರಾಯಣ ಅವರು 1938 ಮೇ 12 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಚ್.ಗುಂಡಪ್ಪ, ತಾಯಿ ಜಾನಕಮ್ಮ. ಸಮಾಜಶಾಸ್ತ್ರ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪುರುಷೋತ್ತಮ ದಾಸರ ಸಮಗ್ರ ಕೃತಿಗಳು, ವಿಜಯ ದಾಸರ ಸಮಗ್ರ ಕೀರ್ತನೆಗಳು, ರತ್ನಾಕರವರ್ಣಿಯ ಶತಕತ್ರಯ, ಜ್ಞಾನವಂತರಾಗಿ ಜಾಗರೂಕರಾಗಿರಿ, ಉತ್ತಮ ಕ್ಷಮಾಧರ್ಮ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.