ಡಾ.ಕೆ.ಬಿ. ರಂಗಸ್ವಾಮಿ ಅವರು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಿಂದ ಎಂ.ಬಿ.ಬಿ.ಎಸ್, ಎಂ.ಡಿ(ಪೀಡಿ) ಪದವೀಧರರು. ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಿರುಗವಿತೆಗಳು, ಲಲಿತ ಪ್ರಬಂಧಗಳು, ವೈದ್ಯಕೀಯ ಹಾಗೂ ವೈಚಾರಿಕ ಲೇಖನಗಳು ಮತ್ತು ಮಕ್ಕಳ ಕವನಗಳನ್ನು ರಚಿಸಿದ್ದಾರೆ. ಸಂಗೀತ, ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು.
2011 ಮತ್ತು 2012 ರ ಸುಧಾ ಯುಗಾದಿ ವಿಶೇಷಾಂಕದ ಲಲಿತ ಪ್ರಬಂಧ ಸ್ಪರ್ಧಾವಿಜೇತರಾಗಿದ್ದರು. ‘ಕೆಲವು ಸಾಮಾನ್ಯ ಕಾಯಿಲೆಗಳು’, ‘ಗರಿಕೆ’, ‘ಹಕ್ಕಿ ಮತ್ತು ಮೋಡ’, ‘ಬೆಳದಿಂಗಳ ಹೈಕುಗಳು’, ‘ಕವಿತೆಗಷ್ಟೇ ಸಾಧ್ಯ’ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬಾಲಂಗೋಚಿ (ಮಕ್ಕಳ ಕವನ ಸಂಕಲನ).