ಲೇಖಕಿ, ಅನುವಾದಕಿ ಎಂ. ಉಷಾ ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. 1967 ಮೇ 12 ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್‌ಡಿ ಪದವಿ ಪಡೆದಿದ್ದಾರೆ. ಸಾಹಿತ್ಯ, ವಿಮರ್ಶೆ, ಆಧುನಿಕ ಪೂರ್ವ ಸಾಹಿತ್ಯ ಮತ್ತು ಇತಿಹಾಸ ವಿಷಯದಲ್ಲಿ ಆಸಕ್ತಿ. ಅನೇಕ ಗ್ರಂಥಗಳನ್ನು ಅನುವಾದಿಸಿದ್ದಾರೆ. ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಪತ್ರಿಕೆ ಮತ್ತು ಮಹಿಳೆ, ಭಾರತೀಯ ಸ್ತ್ರೀವಾದ ಮತ್ತು ಸಂಸ್ಕೃತಿ ಚಿಂತನೆ, ಮಹಿಳೆ ಮತ್ತು ಜಾತಿ, ಮಹಿಳಾ ಅಧ್ಯಯನ, ಆಧುನಿಕ ಮಹಿಳಾ ಸಾಹಿತ್ಯ, ಭಾಷಾಂತರ ಮತ್ತು ಲಿಂಗ ರಾಜಕಾರಣ, ಭಾಷಾಂತರ ಪ್ರವೇಶಿಕೆ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
‘ಶೂಲಿ ಹಬ್ಬ’ ಎಂಬ ನಾಟಕ ಬರೆದಿದ್ದು ಸ್ತ್ರೀ ಕುರಿತ ಹಲವಾರು ಲೇಖನಗಳನ್ನು ಬರೆದಿದ್ದಾರೆ. ‘ಇನ್ನರ್ ವ್ಲೀಲ್ ರೋಟರಿ ಪ್ರಶಸ್ತಿ, ಇಂದಿರಾ ವಾಣಿರಾವ್ ದತ್ತಿ ಪ್ರಶಸ್ತಿ’ ಗಳಿಗೆ ಭಾಜನರಾಗಿದ್ದು ಗೌರವ ಹುದ್ದೆಗಳನ್ನು ಅಲಂಕರಿಸಿದ್ದಾರೆ. ‘ಅರ್ಧ ಕಥಾನಕ’ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.