ತಮಿಳು ಕಾವ್ಯಮೀಮಾಂಸೆ- ತಮಿಳಿನ ಆಧುನಿಕ ಲೇಖಕರಲ್ಲಿ ಪ್ರಮುಖ ಚಿಂತಕ, ಕಾದಂಬರಿಕಾರರಾದ ಡಾ.ಕಾರ್ಲೋಸ್ ಅವರ ಕೃತಿಯನ್ನು ಕನ್ನಡಕ್ಕೆ ಎಸ್.ಸುಚಿತ್ರಲತಾ ಮತ್ತು ಮೀರಾ ಅವರು ಅನುವಾದಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತ ಕೇಂದ್ರಿತ ಪರಂಪರೆಯ ಜೊತೆಗೆ ಸಮಾನಾಂತರವಾಗಿ, ಸ್ವತಂತ್ರ್ಯವಾಗಿ ಬೆಳೆದ ಇನ್ನೊಂದು ಸಾಂಸ್ಕೃತಿಕ ಪರಂಪರೆ ಎಂದರೆ ದ್ರಾವಿಡರದ್ದು. ಅದರ ಅತ್ಯಂತ ಮುಖ್ಯ ಪ್ರತಿನಿಧಿ ಎಂದರೆ ತಮಿಳು ಸಂಸ್ಕೃತಿ. ಸಂಸ್ಕೃತದ ಜೊತೆಗೆ ಬೆರೆತಿದ್ದೂ ಅದು ಬೇರೆಯಾಗಿಯೇ ಉಳಿದಿದೆ. ಕೆಲವು ದಶಕಗಳಿಂದ ದ್ರಾವಿಡ ಚಳುವಳಿಯ ಸಾಂಸ್ಕೃತಿಕ ರಾಜಕಾರಣದ ಕಾರಣಕ್ಕಾಗಿ , ತಮಿಳು ಸಂಸ್ಕೃತಿ ತನ್ನ ವಿಶಿಷ್ಟತೆಯನ್ನು ಅಪಾರ ಏಕಾಗ್ರತೆಯಿಂದ ಹಠಮಾರಿತನದಿಂದ ಸಾಧಿಸುತ್ತಾ ಬಂದಿದೆ. ತಮಿಳಿನ ವಿಶಿಷ್ಟತೆಯನ್ನು ಸಾಹಿತ್ಯ ಮೀಮಾಂಸೆಯ ಮಟ್ಟದಲ್ಲೂ ಕಾಣುವ ಪ್ರಯತ್ನದ ಫಲವೇ ಈ ಕೃತಿ. ತಮಿಳು ಸಂಸ್ಕೃತಿ ವಿಶಿಷ್ಟತೆಯನ್ನು ಅಗತ್ಯವಾದ ಸಹಾನುಭೂತಿ ಮತ್ತು ವಿಮರ್ಶಾ ವಿವೇಕದ ಮೂಲಕ ನೋಡಲಾಗಿದೆ.
©2024 Book Brahma Private Limited.