ಖ್ಯಾತ ಲೇಖಕ ಯು.ಆರ್. ಅನಂತಮೂರ್ತಿ ಅವರ ಆತ್ಮಕತೆ ’ಸುರಗಿ’. ತಮ್ಮ ಕತೆ-ಕಾದಂಬರಿ ಮತ್ತು ಪ್ರಖರ ಚಿಂತನೆಗಳ ಮೂಲಕ ಮನೆ ಮಾತಾದವರು ಅನಂತಮೂರ್ತಿ. ಅವರಿದ್ದಲ್ಲಿ ವಿವಾದದ ಕಿಡಿ ಮತ್ತು ಅದರಿಂದ ಉಂಟಾದ ಬೆಳಕು ಎರಡೂ ಇರುತ್ತಿದ್ದವು.
’ಸಂಸ್ಕಾರ’ ಕಾದಂಬರಿಯಿಂದ ಆರಂಭವಾದ ವಿವಾದಗಳ ಹುತ್ತ ಕೊನೆಯ ಗಳಿಗೆಯ ವರೆಗೂ ಮುಂದುವರೆದಿದ್ದವು. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರ ಜೀವನ ಮತ್ತು ಅದು ಸಾಗಿ ಬಂದ ರೀತಿಯನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಸ್ವತಃ ಲೇಖಕರಾಗಿದ್ದ ಅನಂತಮೂರ್ತಿ ಅವರೇ ರಚಿಸಿದ ಕೃತಿ ಇದಲ್ಲ. ಬದಲಿಗೆ ಅವರ ನೆನಪುಗಳಿಗೆ ಕವಯತ್ರಿ ಜ.ನಾ. ತೇಜಶ್ರೀ ಅವರು ಅಕ್ಷರ ರೂಪ ನೀಡಿದ್ದಾರೆ. ನಿರೂಪಣೆ ಮತ್ತು ಸಂಯೋಜನೆಗಳೆರಡೂ ತೇಜಶ್ರೀ ಅವರದ್ದು. ಅನಂತಮೂರ್ತಿ ಅವರ ನೆನಪುಗಳು ಅವರು ಸಾಗಿ ಬಂದ ದಾರಿಯನ್ನು ಈ ಗ್ರಂಥದಲ್ಲಿ ದಾಖಲಿಸಿದ್ದಾರೆ. ಅನಂತಮೂರ್ತಿ ಅವರ ಬದುಕು ಎಂದರೆ ಸಮಕಾಲೀನ ಸಾಹಿತ್ಯ, ಸಂಸ್ಕೃತಿ- ಚಿಂತನೆ- ರಾಜಕಾರಣದ ದಾಖಲೀಕರಣವೂ ಹೌದು. ’ಸುರಗಿ’ ಆತ್ಮಕತೆಯು ಸಾಂಸ್ಕೃತಿಕ ಮಹತ್ವದ ಕೃತಿ.
ಲೇಖಕ-ಚಿಂತಕ ಡಾ. ಯು.ಆರ್. ಅನಂತಮೂರ್ತಿಯವರು ತಮ್ಮ ಬದುಕಿನ ಎಂಬತ್ತರ ಹರಯದಲ್ಲಿ ಹೇಳಿ ಬರೆಸಿದ ಆತ್ಮಕಥನ. ಜ.ನಾ. ತೇಜಶ್ರೀಯವರ ಲವಲವಿಕೆಯ ನಿರೂಪಣೆಯಿದೆ. ಅನಂತಮೂರ್ತಿಯವರ ಬಾಲ್ಯ ಮತ್ತು ಓದಿನ ದಿನಗಳಿಂದ ಹಿಡಿದು ಸಂಸಾರ, ಅಧ್ಯಾಪನ ವೃತ್ತಿ ಮತ್ತು ಸಾಮಾಜಿಕ ಚಟುವಟಿಕೆಗಳವರೆಗೆ ಹರಡಿದೆ. ಅವರ ವಿಶ್ವವ್ಯಾಪಿ ಸಂಚಾರಗಳು ಮತ್ತು ಸಾರ್ವಜನಿಕ ವಲಯದ ಹುದ್ದೆಗಳ ಅನುಭವವನ್ನು ದಾಖಲಿಸುತ್ತದೆ. ಹಿರಿಯ ಇದು ಕನ್ನಡ ಲೇಖಕನೊಬ್ಬನ ಆತ್ಮಕಥೆ, ಹಾಗೆಯೇ ಇಪ್ಪತ್ತನೆ ಶತಮಾನದ ದ್ವಿತೀಯ ಭಾಗದ ಸಾಹಿತ್ಯಿಕ-ಸಾಂಸ್ಕ ತಿಕ ಚರಿತ್ರೆಯ ಅನಾವರಣ ಕೂಡ ಹೌದು.
Sahitya Akademi Presents by Documentary Film.
©2024 Book Brahma Private Limited.