‘ನೀರ ಮೇಲಣ ಗುಳ್ಳೆ’ ನಾನು ನನ್ನ ಬದುಕು- ಹಿರಿಯ ಸಾಹಿತಿ ಜಿ.ಎಸ್. ಆಮೂರ ಅವರ ಆತ್ಮಕತೆ. ಲೇಖಕರ ಪ್ರಕಾರ ಆತ್ಮಕತೆಯು ಅವರ ಋಣಸಂದಾಯದ ಒಂದು ಕಾರ್ಯವಿಧಾನ. ಈ ಇಡೀ ಕಥನದ ಮೂಲಕ ಮೂಡಿಬರುವ ಆಮೂರರ ಚಿತ್ರ ಅನನ್ಯವಾದದ್ದು. ಕುಟುಂಬ ವತ್ಸಲ ಪತಿ-ತಂದೆಯಾಗಿ, ಆತ್ಮೀಯ ಗೆಳೆಯನಾಗಿ, ಅಧ್ಯಯನಶೀಲ ವಿದ್ವತ್ಪೂರ್ಣ ವಿದ್ಯಾರ್ಥಿಪ್ರಿಯ ಶಿಕ್ಷಕನಾಗಿ ಮತ್ತು ಕನ್ನಡ ಸಾಹಿತ್ಯಲೋಕ ಕಂಡ ಶ್ರೇಷ್ಠ ವಿದ್ವಾಂಸ- ವಿಮರ್ಶಕನಾಗಿ. ಆಮೂರರ ಈ ಲೋಕಯಾತ್ರೆಯಲ್ಲಿ ಕಾವ್ಯದ ಮಾಧುರ್ಯವಿದೆ. ಕಾದಂಬರಿಯ ವಿಸ್ತಾರತೆ ಇದೆ. ಪ್ರಬಂಧದ ಲಾಲಿತ್ಯವಿದೆ. ನಾಟಕದ ಲವಲವಿಕೆಯೂ ಇದೆ. ತತ್ತ್ವಜ್ಞಾನದ ಗಹನತೆಯೂ ಇದೆ. ಹೀಗೆ ಹಲವು ಬಗೆಯ ಅನುಭವಗಳನ್ನು ಒಟ್ಟಿಗೆ ನೀಡಿರುವ ಕೃತಿ ಇದು.
©2024 Book Brahma Private Limited.