ಸ್ಮೃತಿ ಪಟಲದಿಂದ-ಸಂಪುಟ-ಭಾಗ-1

Author : ಶಿವರಾಮ ಕಾರಂತ

Pages 484

₹ 261.00




Year of Publication: 2010
Published by: ಐಬಿಎಚ್‌ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.

Synopsys

“ಸ್ಮೃತಿಪಟಲದಿಂದ-ಸಂಪುಟ-1” - ಈ ಕೃತಿಯು ಡಾ. ಶಿವರಾಮ ಕಾರಂತ ಅವರು ತಮ್ಮ ಸಾಹಿತ್ಯಕ ಬದುಕಿನ ಸಾರ್ಥಕ 60 ವರ್ಷಗಳ ಸುದೀರ್ಘ ಅನುಭವಗಳನ್ನು ಸರಣಿ ಕೃತಿಗಳಲ್ಲಿ ದಾಖಲಿಸಿದ್ದರ ಪೈಕಿ ಈ ಕೃತಿಯು ಮೊದಲನೇ ಸಂಪುಟವಾಗಿದೆ. ಮಿತ್ರರೊಬ್ಬರು ತಮ್ಮ ಜೀವನಚರಿತ್ರೆ ಬರೆಯುವ ಉತ್ಸಾಹ ತೋರಿದಾಗ “ನೀವು ನನ್ನನ್ನು ಕೊಲ್ಲಬೇಕಿಲ್ಲ; ನನ್ನ ಆತ್ಮಹತ್ಯೆಯನ್ನು ನಾನೇ ಮಾಡಿಕೊಳ್ಳುತ್ತೇನೆ” ಎಂದು ಪರಿಹಾಸದಿಂದ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಈ ನಿಷ್ಠುರ ನುಡಿ, ನಿಲುವಿನ ವ್ಯಕ್ತಿ ಮೇಲಿನ ಪುಸ್ತಕಗಳಲ್ಲಿ ವಸ್ತುನಿಷ್ಠವಾಗಿ ಅಂತಹ ಪ್ರಯತ್ನ ಮಾಡಿದ್ದಾರೆ. ಆರಂಭಿಕ “ಬಾಳ್ವೆಯೇ ಬೆಳಕು’ ಕೃತಿಯಲ್ಲಿ ತಮ್ಮಜೀವನದೃಷ್ಟಿಯನ್ನು ಪ್ರತಿಪಾದಿಸಿದ್ದರೆ, 1950ರವರೆಗಿನ ಚಟುವಟಿಕೆ-ಅನುಭವಗಳನ್ನು “ಹುಚ್ಚು ಮನಸ್ಸಿನ ಹತ್ತು ಮುಖದ ಮೊದಲ ಆವೃತ್ತಿಯಲ್ಲಿ, ನಂತರದ ದಶಕದ ಅನುಭವಗಳನ್ನು ಎರಡನೇ ಆವೃತ್ತಿಯಲ್ಲಿ ಬರೆದು ಪ್ರಕಟಿಸಿರುವುದು ಕಾರಂತ ಅಧ್ಯಯನಕ್ಕೆ ಒಂದು ಬಹು ಮುಖ್ಯ ಆಕರ ಒದಗಿಸಿದೆ. ಅವರ ಕಾದಂಬರಿಗಳಷ್ಟೇ ಅಥವಾ ಅದಕ್ಕಿಂತಲೂ ಒಂದು ಕೈ ಮಿಗಿಲಾದ ಜನಪ್ರಿಯತೆಯನ್ನು ಈ ಆತ್ಮಕಥನಗಳು ಉಳಿಸಿಕೊಂಡಿದೆ. “ಸ್ಮೃತಿಪಟಲದಿಂದ ಸಂಪುಟ-1”ರಲ್ಲಿ ‘ನಿಸರ್ಗ ಮತ್ತು ನಾನು‘, ‘ರಂಗಭೂಮಿ ಮತ್ತು ನಾನು‘, ‘ನಾನು ಮತ್ತು ಶಿಕ್ಷಣ‘ಗಳಂತಹ ಅಧ್ಯಾಯಗಳಲ್ಲಿ ತಮಗೆ ಈ ನಂಟುಗಳು ಬೆಳೆದು ಬಂದಿದ್ದನ್ನು ವಿವರವಾಗಿ ದಾಖಲಿಸಿದ್ದಾರೆ.ಈ ಕ್ಷೇತ್ರದಲ್ಲಿಯ ಅವರ ಅನುಭವಗಳು, ಪ್ರಯೋಗಗಳ ಚಿಂತನಶೀಲತೆಯನ್ನು ವಿವರಿಸಿದ್ದಾರೆ. 

ಬೆಂಗಳೂರಿನ ರಾಜಲಕ್ಷ್ಮೀ ಪ್ರಕಾಶನವು 1977ರಲ್ಲಿ (ಪುಟ: 458)  ಈ ಕೃತಿಯನ್ನು ಮೊದಲ ಬಾರಿಗೆ ತದನಂತರ 1981ರಲ್ಲಿ ಪುನರ್ ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books