ಲೇಖಕ ಟಿ.ಕೆ. ಪ್ರೇಮಕುಮಾರ ಅವರ ಆತ್ಮಕಥೆ-ಕರ್ಮ ಕೆಫೆ. ತಮ್ಮ ಎಲ್ಲ ಸಂಕಷ್ಟಗಳ ಪರಿಹಾರಕ್ಕೆ ಲೇಖಕರು ಆಶ್ರಯಿಸಿದ್ದು ಉತ್ತಮ ಗ್ರಂಥಗಳನ್ನು ಹಾಗೂ ಅಧ್ಯಾತ್ಮ ಗುರುಗಳ ಕೃಷೆಯನ್ನು. ಅವರ ಉಪದೇಶಾತ್ಮಕ ಭಾಷಣಗಳನ್ನು. ಅಧ್ಯಾತ್ಮಿಕತೆಯ ಪ್ರಾಮುಖ್ಯತೆ ಹಾಗೂ ಪ್ರಯೋಜನವು ಇತರರಿಗೂ ಸಿಗಲಿ ಎಂದ ಆಶಯದೊಂದಿಗೆ ಕರ್ಮ ಕೆಫೆ ಬರೆಯಲಾಗಿದೆ. ಇಲ್ಲಿ ಕರ್ಮದ ಮೌಢ್ಯ ಪ್ರತಿಪಾದನೆ ಇಲ್ಲ. ಆದರೆ, ಉತ್ತಮ ಕರ್ಮಗಳಿಂದ ಉತ್ತಮ ಫಲಿತಾಂಶ ಬರುತ್ತದೆ ಎಂಬ ನಂಬಿಕೆ ಲೇಖಕರದ್ದು. ಆದರೆ, ನಂಬಿಕೆಯ ಮಿತಿಯನ್ನೂ ಸಹ ಲೇಖಕರು ಗುರುತಿಸಿ ತಮ್ಮ ವಿಚಾರವನ್ನು ಮಂಡಿಸಿದ್ದು, ಓದುಗರ ಗಮನ ಸೆಳೆಯುತ್ತದೆ.
ಟಿ.ಕೆ.ಪ್ರೇಮಕುಮಾರ ಅವರು ನವಭಾರತ ಟ್ರಸ್ಟ್ ಮುಖ್ಯಸ್ಥರು. ಕಟ್ಟಡ ನಿರ್ಮಾಣದ ಎಂಜಿನಿಯರರು. ಬೆಂಗಳೂರಿನಲ್ಲಿರುವ ಶೂನ್ಯವಲಯ, ಸೇಫ್ ಹ್ಯಾಂಡ್ಸ್- ಆಪ್ತ ಸಲಹಾ ಕೇಂದ್ರ, ಧ್ಯಾನ ಗ್ರಾಮೀಣ (ಮಂಡ್ಯ), ಚಕ್ರ -ಸಾವಯವ ಕೃಷಿ ಕೇಂದ್ರ (ನಿಡಘಟ್ಟ, ಮದ್ದೂರು), ಆದಿತ್ಯ ಪ್ರಕಾಶನ, ಕುವೆಂಪು ಅಧ್ಯಾತ್ಮ ಸಮಿತಿ, ಪರಿಶುಭ್ರ ಭಾರತ, ಝೀರೋ ಟು. ಹೀರೋ ಪ್ರಶಸ್ತಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿ ವಿಕಸನ ಸೇರಿದಂತೆ ಇತರೆ ಯೋಜನೆಗಳೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಿರಾಮಿಡ್ ಧ್ಯಾನ ಪ್ರಚಾರ ಟ್ರಸ್ಟ್ (ಕರ್ನಾಟಕ) ಉಪಾಧ್ಯಕ್ಷರು, ಕಳೆದ 30 ದಶಕಗಳಿಂದ ಬೆಂಗಳೂರಿನ ರಾಮಕೃಷ್ಣಆಶ್ರಮ, ಸ್ವಾಮಿ ಚಿನ್ಮಯಾನಂದ ಸೇರಿದಂತೆ ಇತರೆ ಅಧ್ಯಾತ್ಮಕ ಸಂಸ್ಥೆಗಳೊಂದಿಗೆ ಒಡನಾಟ ಇರಿಸಿಕೊಂಡಿದ್ದಾರೆ. ಝೀರೋ ...
READ MORE