‘ಅಂತರಂಗದ ಸ್ವಗತ’ ಕೃತಿಯು ಡಾ. ಪಾರ್ವತಿ ಜಿ. ಐತಾಳ್ ಅವರ ಆತ್ಮಕಥನವಾಗಿದೆ. ಒಂದು ಕಾಲಘಟ್ಟದ ಐತಿಹಾಸಿಕ ಘಟನೆಗಳು, ಸಾಂಸ್ಕೃತಿಕ ಸಂಗತಿಗಳು, ಅಂಥ ಘಟನೆಗಳಿಗೆ ಲೇಖಕರ ಪ್ರತಿಕ್ರಿಯೆಗಳು ಮತ್ತು ಬರೆಯುವ ಕಾಲದಲ್ಲಿ ಉಂಟಾದ ಪಲ್ಲಟಗಳ ತೌಲನಿಕ ಚಿಂತನೆಗಳೂ ಆತ್ಮಕಥನದಲ್ಲಿ ಮುಖ್ಯವಾಗುತ್ತವೆ. ಈ ರೀತಿಯ ದಾಖಲೆಗಳು ಮುಂದಿನ ತಲೆಮಾರಿನ ಓದುಗರಿಗೆ ಒಂದು ಕೊಡುಗೆಯಾಗುತ್ತವೆ. ಹೇಳುವ ರೀತಿಯಲ್ಲಿ ಅಥವಾ ರಚನಾ ತಂತ್ರಗಳಲ್ಲಿ ಲೇಖಕರಿಂದ ಲೇಖಕರಿಗೆ ವ್ಯತ್ಯಾಸವಾಗುತ್ತ ಹೋಗಬಹುದು. ಆದರೆ ಮೂಲತತ್ವ ಎಲ್ಲದಕ್ಕೂ ಒಂದೇ. ಯಶಸ್ಸಿನ ಹಾದಿಯಲ್ಲಿ ಎದುರಿಸಿದ ಕಷ್ಟಗಳಿರಬಹುದು, ಪಡೆದ ಯಶಸ್ಸಿನ ಫಲವಾಗಿ ಸವಿದ ಸಂತೋಷದ ಕ್ಷಣಗಳಿರಬಹುದು. ಏನಿದ್ದರೂ ಹೇಳುವ ವಿಷಯಗಳು ಓದುಗರಿಗೆ ಸ್ಪೂರ್ತಿದಾಯಕವಾಗಿರಬೇಕು, ಮುಂದಿನ ತಲೆಮಾರಿನ ಮಂದಿಗೆ ಪ್ರೇರಣೆ ನೀಡುವಂತಿರಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ. ಆತ್ಮಕಥನದಲ್ಲಿ ಕಲ್ಪನೆಯ ಕಟ್ಟು ಕಥೆಗಳಿಗೆ ಅವಕಾಶವಿಲ್ಲ. ವಾಸ್ತವದಲ್ಲಿ ಏನು ನಡೆಯಿತು ಅನ್ನುವುದಷ್ಟೇ ಇಲ್ಲಿ ಮುಖ್ಯ. ಉದ್ಯೋಗ, ಗೃಹಕೃತ್ಯ, ಸಂಸಾರ ನಿರ್ವಹಣೆಯ ಹೊಣೆಗಳ ನಡುವೆಯೂ ಬರಹಗಾರ್ತಿಯಾಗಿ ಓರ್ವ ಮಹಿಳೆ ಯಶಸ್ವಿಯಾಗಬಲ್ಲಳು ಎಂಬುದಕ್ಕೆ 'ಅಂತರಂಗದ ಸ್ವಗತ' ಕೃತಿಯೇ ಸಾಕ್ಷಿ.
ಪಾರ್ವತಿ ಜಿ.ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎಂಬ ಹಳ್ಳಿಯಲ್ಲಿ ಜುಲೈ 23, 1957ರಂದು ಜನಿಸಿದರು. 1981ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. 2012ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ಮಂಗಳೂರು ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ದುಡಿದ ಪಾರ್ವತಿಯವರು, ಶ್ರೀ ಗಂಗಾಧರ ಐತಾಳರೊಡನೆ ಮದುವೆಯಾದ ಬಳಿಕ 1988ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಬಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾರ್ವತಿ ಅವರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ...
READ MORE