‘ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ’ ಲೇಖಕಿ ಶ್ರುತಿ ಬಿ.ಎಸ್ ಅವರ ಕೃತಿ. 18ನೇ ವಯಸ್ಸಿಗೆ ಆಸ್ಟಿಯೋ ಸೆರ್ಕೋಮಾ ಎಂಬ ಕಾಯಿಲೆಗೆ ತುತ್ತಾಗಿ ಆ ರೋಗದ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ ತಮ್ಮ ಅನುಭವಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ರೋಗ ಅದನ್ನು ಸ್ವೀಕರಿಸಿ, ಎದುರಿಸಿದ ಪರಿ ಓದುಗರಿಗೆ ಪ್ರೇರಣೆ ನೀಡುತ್ತದೆ. ಈ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಧಾರವಾಡದ ಮಾತ್ರೋಶ್ರೀ ರತ್ಮಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು ಮಂಡ್ಯದ ಅಡ್ವೈಸರ್ ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ.
ಲೇಖಕಿ ಶ್ರುತಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಣಿಗ ಗ್ರಾಮದವರು. ಮೂಲ ಹೆಸರು ಶ್ರುತಿ ರಾವ್. 2008ನೇ ಇಸವಿಯಲ್ಲಿ ಶಿವಮೊಗ್ಗದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದು, ಅನಾರೋಗ್ಯದ (‘ಆಸ್ಟಿಯೋ ಸರ್ಕೋಮಾ) ಪರಿಣಾಮ ಓದು ನಿಲ್ಲಿಸಿ, ಚಿಕಿತ್ಸೆ ನಂತರ ಮತ್ತೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ ಪಡೆದು, ಮನೋಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯೂ ಪೂರ್ಣಗೊಳಿಸಿದ್ದಾರೆ. ಜೊತೆಗೆ, ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲೊಮಾ ಪಡೆದರು. ಅವರ ಅನಾರೋಗ್ಯವು ‘ಬದುಕ ದಿಕ್ಕು ಆಸ್ಟಿಯೋ ಸರ್ಕೋಮಾ’ ಎಂಬ ಆತ್ಮಕಥನವನ್ನು ಬರೆಯಲು ಪ್ರೇರೇಪಿಸಿತು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಇದೇ ಕೃತಿ “Osteosarcoma ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ-2013