ನನ್ನ ಕೆಲವು ಮಿತ್ರರು ನನ್ನ ಆತ್ಮಕಥೆಯ ಪುಸ್ತಕ ಬರೆಯುತ್ತಿರುವಾಗ, 'ಪೆಥೋಲಜಿ ವಿಷಯದಲ್ಲಿ ಯಾಕೆ ಪುಸ್ತಕ ಬರೆಯುವುದಿಲ್ಲ?' ಎಂದು ಕೇಳಿದರು. ಆ ವಿಷಯದಲ್ಲಿ 26 ವರ್ಷಗಳ ಅನುಭವದಿಂದ ನಾನು ನಿಷ್ಣಾತನಾಗಿದ್ದೇನೆಂದು ಅವರು ತಿಳಿದಿದ್ದರು. ಆದರೆ ವಾಸ್ತವಿಕವಾಗಿ ನಾನು ಪರಿಣಿತನಾಗಿರಲಿಲ್ಲ. ಏಕೆಂದರೆ ವಿಜ್ಞಾನವು ದಿನೇ ದಿನೇ ವೃದ್ಧಿಯಾಗುತ್ತಾ ಇರುತ್ತದೆ. ಅದು ನಿಂತ ನೀರಲ್ಲ. ಮಸ್ತಕ ಬರೆದು ಪೂರ್ಣವಾಗುವಷ್ಟರಲ್ಲಿ ಅನೇಕ ನವೀನ ಶೋಧನೆಗಳು ಆಗಿರುತ್ತವೆ. ಆದ್ದರಿಂದ ಪುಸ್ತಕದ ಜ್ಞಾನ ಹಳೆಯದಾಗುತ್ತದೆ. ಆದರೆ ನನ್ನ ಜನ್ಮಾಂತರದಲ್ಲಿ ಅದ ಅನುಭವ ಎಂದಿಗೂ ಹೊಸದಾಗಿರುತ್ತದೆ. ಆ ವಿಚಿತ್ರ ಘಟನೆಗಳು ನೆನಪಾದಾಗ ಕಲಿಯುಗದಲ್ಲಿಯೂ ಪರಮಾತ್ಮನ ಅಸ್ತಿತ್ವದ ಭಾವನೆ ಹೃದಯದಲ್ಲಿ ಮೂಡುತ್ತದೆ. ಪ್ರಥಮಬಾರಿಗೆ ನನ್ನ ಆತ್ಮಕತೆಯನ್ನು 1908ನೇ ಇಸವಿಯಲ್ಲಿ ಇಂಗ್ಲೀಷ್‌ನಲ್ಲಿ ಬರೆದಾಗ ಇದರ ಶ್ಲಾಘನೆ ಇಡೀ ಭಾರತದಲ್ಲಿ ಆಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಈ ಏಳು ವರ್ಷಗಳಲ್ಲಿ ಎರಡು ಬಾರಿ ಇಂಗ್ಲೀಷಿನಲ್ಲಿ ಒಂದು ಸಲ ಗುಜರಾತಿ ಭಾಷೆಯಲ್ಲಿ ಮತ್ತು ಈಗ ಕನ್ನಡ ಭಾಷೆಯಲ್ಲಿಯೂ ಪ್ರಕಟವಾಗಬಹುದು ಎಂಬುದು ನಿಜಕ್ಕೂ ಕಲ್ಪನಾತೀತ ಎಂದು ದಿವಾಕರ ಹೆಂಜಾಲ ಪುಸ್ತಕದ ಲೇಖಕರ ನುಡಿಯಲ್ಲಿ ತಿಳಿಸಿದ್ದಾರೆ.
ಪಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮದ ಡಿಪ್ಲೊಮಾ ಪದವೀಧರರು. ಪ್ರಸ್ತುತ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಅಡಿಯಲ್ಲಿ ಶಿರಸಿಯಲ್ಲಿರುವ 'ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ'ದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರಾದೇಶಿಕ ಸಂಶೋಧನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಸ್ವದೇಶಿ ವಿಜ್ಞಾನ ಆಂದೋಲನ, 6ನೇ ಕನ್ನಡ ವಿಜ್ಞಾನ ಸಮ್ಮೇಳನದಲ್ಲಿ 'ಅತ್ಯುತ್ತಮ ಪ್ರಬಂಧ ಮಂಡನೆ' ಪ್ರಶಸ್ತಿ. ಕೃಷಿಮಾಧ್ಯಮ ಕೇಂದ್ರ ಧಾರವಾಡ ಸಂಸ್ಥೆಯಿಂದ ಅಭಿವೃದ್ಧಿ ಪತ್ರಿಕೋದ್ಯಮಕ್ಕಾಗಿ ಅತ್ಯುತ್ತಮ ಅಭ್ಯರ್ಥಿ ಪುರಸ್ಕೃತರು. 2012-13ನೇ ಸಾಲಿನಲ್ಲಿ ಸರ್ಕಾರಿ ನೌಕರರಿಗೆ ನೀಡುವ ಸರ್ವೋತ್ತಮ ಸೇವಾ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ 'ಹೈನು ಹೊನ್ನು' ಕೃತಿಗಾಗಿ ಶ್ರೇಷ್ಠ ಲೇಖಕ ಪ್ರಶಸ್ತಿ, 2016 ...
READ MORE