ನೆನಪಿನ ರಂಗಸ್ಥಳ

Author : ಜಿ.ಎಸ್. ಭಟ್

Pages 180

₹ 200.00




Year of Publication: 2021
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕೆರೆಮನೆ ಶಿವರಾಮ ಹೆಗಡೆ ಆತ್ಮಕಥನ ‘ನೆನಪಿನ ರಂಗಸ್ಥಳ’ ಕೃತಿಯನ್ನು ಲೇಖಕ ಜಿ.ಎಸ್. ಭಟ್ ನಿರೂಪಿಸಿದ್ದಾರೆ. 1995ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿಯು 2021ರಲ್ಲಿ ಮರುಮುದ್ರಣಗೊಂಡಿದೆ. ಪುಸ್ತಕದ ಕುರಿತು ಬರೆಯುತ್ತಾ..’ಶಿವರಾಮ ಹೆಗಡೆ ಸಹಜ ಬಡತನದಲ್ಲಿ ಹುಟ್ಟಿದರು. ದಿನದ ಅನ್ನಕ್ಕಾಗಿ ಕಟಪಟೆ ಮಾಡುತ್ತಲೇ ಮುಖಕ್ಕೆ ಬಣ್ಣ ಹಚ್ಚಿ ಆಟ ಕುಣಿಯುವ ಗೀಳನ್ನು ಹಚ್ಚಿಕೊಂಡರು. ವಿಶಿಷ್ಟ ಪಾತ್ರಾಭಿನಯ, ಸಂಘಟನೆ, ಚಿಂತನೆಗಳ ಮೂಲಕ ಬೆಳೆದು ನಿಂತರು. ಯಕ್ಷಗಾನ ರಂಗಭೂಮಿಗೂ ಅದರ ಸುತ್ತ ಇದ್ದ ಸಮಾಜಕ್ಕೂ ಬೆಳವಣಿಗೆಯ ಚೈತನ್ಯ ನೀಡಿದರು. ತಾನು ಹುಟ್ಟಿ ಬೆಳೆದ ನೆಲದ ಸಾರ ಹೀರಿ ಪುನಃ ಆ ನೆಲದ ಕಸುವಿಗೆ ಕಾರಣರಾದರು. ಎಂಬತ್ತನಾಲ್ಕು ವರ್ಷಗಳ ನಿಡುಬಾಳಿನ ವಿವಿಧ ಅನುಭವಗಳಿಗೆ ತನ್ನ ಅಂತರಂಗವನ್ನು ಒಡ್ಡಿಕೊಂಡರು. ಆ ಅನುಭವಗಳನ್ನು ಸಮಾನ ಹೃದಯಕ್ಕೆ ಪಾವತಿ ಮಾಡುವ ಶಕ್ತಿ ಉಳ್ಳವರೂ ಆಗಿದ್ದರು. ಇವೇ ಮುಂತಾದ ಕಾರಣಗಳಿಗಾಗಿ ಅವರ ಆತ್ಮಕಥನ ಆಸಕ್ತ ಓದುಗರಿಗೆ ಅಗತ್ಯ ಎಂದು ಭಾವಿಸಿದರೆ ತಪ್ಪಲ್ಲ. ಆದರೆ ಅದನ್ನು ಹಿಡಿದು ಇಡುವುದು ಹೇಗೆ? ಶಿವರಾಮ ಹೆಗಡೆಯವರು ಮಾತಾಡಬಲ್ಲರೇ ವಿನಃ ಬರೆಯಲಾರರು. ಅವರ ಬರವಣಿಗೆಯ ಶಕ್ತಿ ಪತ್ರ ಬರೆಯುವುದಕ್ಕೆ ಮಾತ್ರ ಸೀಮಿತ. ಸುದೀರ್ಘ ಅನುಭವಗಳನ್ನು ನೆನಪಿಸಿಕೊಂಡು ಒಂದು ವ್ಯವಸ್ಥೆಯಲ್ಲಿ ಬರೆಯುತ್ತ ಹೋಗುವುದು ಎಂಥವರಿಗೂ ಕಷ್ಟದ ಕೆಲಸ. ಆಗ ಸಹಜವಾಗಿ ಹೊಳೆದದ್ದು ಧ್ವನಿಮುದ್ರಣದ ತಂತ್ರ. ಅವರ ಮಾತುಗಳನ್ನು ಕ್ಯಾಸೆಟ್‍ಗಳಲ್ಲಿ ಹಿಡಿದು ನಂತರ ಬರೆದು ತೆರೆಯಬಹುದು ಎನಿಸಿತು. ಇದಕ್ಕೆ ಶ್ರೀ ಶಂಭು ಹೆಗಡೆಯವರೂ ಒಪ್ಪಿದರು. ಕ್ಯಾಸೆಟ್‍ಗಳನ್ನೂ ಒದಗಿಸಿದರು. ಅಷ್ಟರಮಟ್ಟಿಗೆ ನನ್ನ ಕೆಲಸವೂ ಸುಲಭವಾಯಿತು. ಇದೊಂದು ಮಂಡಳಿಯದೇ ಕೆಲಸ ಎಂಬ ಭಾವನೆಯಿಂದ ಪ್ರಾರಂಭಿಸಿದೆ. 1982ರ ಅಕ್ಟೋಬರ್ ತಿಂಗಳಲ್ಲಿ ಸುಮಾರು ಒಂದು ವಾರ ಕಾಲ ಸಾಗರದ ನನ್ನ ಮನೆಯಲ್ಲಿ ಶ್ರೀ ಶಿವರಾಮ ಹೆಗಡೆಯವರ ಸನ್ನಿಧಿಯಲ್ಲಿ ಕುಳಿತು ಸಮಗ್ರವಾದ ಅವರ ಬದುಕನ್ನು ನೇರ ಅವರ ಬಾಯಿಂದಲೇ ಕೇಳಿದೆ, ಧ್ವನಿಮುದ್ರಿಸಿಕೊಂಡೆ. ನಾನೊಂದು ಸಹಜ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರವೆಂಬಂತೆ ಅವರು ಹೇಳುತ್ತಾ ಹೋದರು. ಆತ್ಮೀಯನಾದ ಕಿರಿಯ ಸ್ನೇಹಿತನೊಬ್ಬನ ಎದುರಿಗೆ ತನ್ನ ಅಂತರಂಗವನ್ನು ತೋಡಿಕೊಳ್ಳುವಂತೆ ಅವರು ಮಾತನಾಡಿದರು. ನನ್ನ ಪ್ರಶ್ನೆಗಳನ್ನು ಕ್ಯಾಸೆಟ್ಟಿನಲ್ಲಿ ದಾಖಲಿಸಲಿಲ್ಲ. ಆ ಪ್ರಶ್ನೆಗಳು ನೆನಪನ್ನು ಕೆದಕುವ, ಜೋಡಿಸುವ, ಮಾತನ್ನು ಮುಂದುವರೆಸುವ ಸಹಜ ನಿರೂಪಣೆಗೆ ನೆರವಾದವು’ ಎನ್ನುತ್ತಾರೆ ಲೇಖಕ ಜಿ.ಎಸ್. ಭಟ್.

ಜೊತೆಗೆ ಇದು ಕೇವಲ ಸಂದರ್ಶನ ಅಲ್ಲ. ಸುಮ್ಮನೆ ಕುಳಿತು ಸುದ್ದಿ ಹೇಳುವುದು ಎನ್ನುತ್ತಾರಲ್ಲ; ಆ ಧಾಟಿ. ಕ್ಯಾಸೆಟ್ಟನ್ನು ಕೇಳಿದವರಿಗೆ ಅವರು ಎದುರು ಕುಳಿತವರೊಂದಿಗೆ ತನ್ನ ನೆನಪನ್ನು ಉದುರಿಸುತ್ತ ಹೋದ ಹಾಗೆ ಅನ್ನಿಸಬಹುದು; ಅಷ್ಟೆ, ಅಂಥ ಒಂದು ಆಪ್ತವಾದ ಆತ್ಮೀಯ ಧಾಟಿಯನ್ನು ಬಹುಶಃ ಓದುಗರಾದ ನೀವೂ ಅನುಭವಿಸುತ್ತೀರೆಂದು ನಂಬಲಾ ಎಂದು ಓದುಗರನ್ನು ಪ್ರಶ್ನಿಸಿದ್ದಾರೆ.

About the Author

ಜಿ.ಎಸ್. ಭಟ್

ಹಿರಿಯ ಲೇಖಕ ಜಿ.ಎಸ್ ಭಟ್ (ಸಾಗರ) 1944ರಲ್ಲಿ ಹೊನ್ನಾವರದ ಗಜನಿ ಮಠದಲ್ಲಿ ಜನಿಸಿದರು. ಸಾಗರದ ಲಾಲ ಬಹುದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನಿವೃತ್ತರಾಗಿರುವ ಜಿ.ಎಸ್ ಭಟ್ ಅವರು ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ ಹೊಂದಿರುವರು. ಇವರು ಯಕ್ಷಗಾನ ಕುರಿತ ಸಂಶೋಧನಾ ಲೇಖನಗಳು, ಕತೆ, ಕವಿತೆ, ಅಂಕಣಗಳಲ್ಲಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ರಂಗಭೂಮಿ, ಯಕ್ಷಗಾನ ವಿದ್ವಾಂಸರಾಗಿರುವ ಅವರು ಸಾಂಸ್ಕೃತಿಕ, ಸಂಘಟಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.  ಕೃತಿಗಳು: ಕುಮಾರವ್ಯಾಸನ ಕರ್ಣಾಟಭಾರತ ಕಥಾ ಮಂಜರಿ ಪ್ರವೇಶ, ರಾಘವಾಂಕನ ಹರಿಶ್ಚಂದ್ರಕಾವ್ಯ ಪ್ರವೇಶ, ಅಕ್ಕಮ್ಮಜ್ಜಿಯ ಗಂಡನೂ ವಾಣಾಸಜ್ಜನ ಹೆಣ್ತಿಯೂ, ಕೆರೆಮನೆ ಶಂಭು ಹೆಗಡೆ ಅಧ್ಯಯನ, ಪಾವೆಂ ಕಸ್ತೂರಿ, ಮಂಜೀ ಮಹಾದೇವನ ಗಂಜೀ ಪುರಾಣ, ನೆನಪಿನ ರಂಗಸ್ಥಳ,    ...

READ MORE

Related Books