ಕನ್ನಡ ಸಾಹಿತ್ಯ ವೇದಿಕೆಯಲ್ಲಿ ವಿಡಂಬಾರಿ ಎಂದೇ ಖ್ಯಾತರಾದ ವಿಷ್ಣು ಜಿ. ಭಂಡಾರಿಯವರು ತೀರಾ ಬಡತನದ ದೇವದಾಸಿ ಕುಟುಂಬದಿಂದ ಬಂದವರು. ಕೇವಲ ಮೂರನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಲಿಕ್ಕೆ ಸಾಧ್ಯವಾಗಿ, ಅಂಚೆ ಇಲಾಖೆಯಲ್ಲಿ ಪುಟ್ಟ ನೌಕರಿಗೆ ತಮ್ಮ ಬದುಕನ್ನು ಕಟ್ಟಿಕೊಂಡರು. ನಿವೃತ್ತಿಯ ತರುವಾಯ ಪುಸ್ತಕ ಮಾರಾಟ ಮಾಡುವ ಸಾಹಿತ್ಯ ಸೇವೆಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಲೇ ಚುಟುಕು ಬರಹ, ಹೋರಾಟ ಮತ್ತು ಪ್ರಗತಿಪರ ಚಿಂತನೆಗಳ ಪ್ರಸರಣದಲ್ಲಿ ತೊಡಗಿಸಿಕೊಂಡವರು. ಈ ಕೃತಿಯೂ ಇವರ ಆತ್ಮ ಕಥೆಯಾಗಿದೆ.
’ವಿಡಂಬಾರಿ’ ಎಂಬ ಕಾವ್ಯನಾಮದಿಂದ ಬರೆಯವ ವಿಷ್ಣು ಗ. ಭಂಡಾರಿ ಜನಿಸಿದ್ದು 1935ರಲ್ಲಿ. ‘ವಿಶಾಲ ಕರ್ನಾಟಕ’ದಲ್ಲಿ ಮೊದಲ ಚುಟುಕು ಪ್ರಕಟವಾಯಿತು. ವಿ.ಗ.ಭಂಡಾರಿ ಬದಲು ಸಂಪಾದಕರು ‘ವಿಡಂಬಾರಿ’ ಎಂದು ಬದಲಿಸಿ ಪ್ರಕಟಿಸಿದರು. ಅಂಚೆ ನೌಕರರಾಗಿದ್ದ ವಿಷ್ಣು ಅವರ ಹೆಸರಿನಲ್ಲಿಯೇ ಪ್ರಕಟವಾದರೆ ಅನವಶ್ಯಕ ತೊಂದರೆ ಎಂಬ ಕಾರಣದಿಂದ ಸಂಪಾದಕರೇ ನಾಮಧೇಯ ಬದಲಿಸಿದ್ದರು). ಮುಂದೆ ಅದೇ ಕಾವ್ಯನಾಮ ಆಯಿತು. ವಿಡಂಬಾರಿ ಅವರ ಬದುಕು ರೂಪಿಸಿದ್ದು ಅಂಕೋಲೆ ಮತ್ತು ಅಲ್ಲಿಯ ಸಮಾಜವಾದಿ ಸ್ನೇಹಿತರು. ಕವಿ ದಿನಕರ ದೇಸಾಯಿ ಅವರ ಪರಿಚಯದ ಜೊತೆಯಲ್ವಾಲಿಯೇ ವಿ.ಜೆ ನಾಯಕ, ಅಮ್ಮೆಂಬಳ ಆನಂದ, ಶಾಂತಾರಾಮ ನಾಯಕ, ವಿಷ್ಣು ನಾಯ್ಕ , ಶ್ಯಾಮ ಹುದ್ದಾರ ….ಹೀಗೆ ಹಲವರು ಸ್ನೇಹಿತರಿಂದ ವೈಚಾರಿಕತೆ ರೂಪುಗೊಂಡಿತು. ’ವಿಡಂಬಾರಿ’ ಅವರ ಬದುಕಿಗೆ ಪಕ್ವತೆ ...
READ MORE