ನಂದೇ ನಾನೋದಿದೆ ಇದೊಂದು ಆತ್ಮ ಕಥನವಾಗಿದೆ. ಈ ಕೃತಿಯು ಗಮಕ ಕಲಾನಿಧಿ ಜೋಳದ ರಾಶಿ ದೊಡ್ಡನಗೌಡರ ಆತ್ಮ ಕಥನವನ್ನು ಸಾರಸಗಟಾಗಿ ಹೇಳುತ್ತದೆ. ಈ ಕೃತಿಯನ್ನು ಓದುತ್ತಿದ್ದಂತೆಯೇ ಅವರ ಜೀವನದಲ್ಲಿ ನಡೆದ ಎಲ್ಲಾ ಘಟನೆಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಓದುಗರ ಬಾಲ್ಯದ ನೆನಪುಗಳು ಅವರ ಜೀವನದಲ್ಲಿ ನಡೆದ ಘಟನೆಗಳು ಎಲ್ಲವ್ನನು ಕಣ್ಣ ಮುಂದೆ ತಂದು , ಓದುಗರನ್ನು ಅವರದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಇದು ಕೇವಲ ದೊಡ್ಡಣಗೌಡ ರ ಬದುಕನ್ನು ಮಾತ್ರವಲ್ಲದೇ ನಾವು ನಮ್ಮ ಯವ್ವನವನ್ನು, ಅಮೂಲ್ಯವಾದ ಬಾಲ್ಯದ ಜೀವನವನ್ನು ಎಲ್ಲದರ ದೃಶ್ಯಗಳು ಕಣ್ಣ ಮುಂದೆ ಗೋಚರವಾದಂತೆ ಈ ಕೃತಿಯೂ ಮಾಡುತ್ತದೆ. ಈ ಕೃತಿಯು ಬಹಳ ಸುಂದರವಾಗಿ ದೊಡ್ಡಣ ಗೌಡ ರ ಆತ್ಮಕಥನದ ಜೊತೆಗೆ ನಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಡುವಲ್ಲಿ ಯಶಸ್ವಿಯಾಗಿದೆ.
©2024 Book Brahma Private Limited.