ಹಿರಿಯ ಸಮಾಜಸೇವಕ ಅಣ್ಣಾ ಹಜಾರೆಯವರು ಮರಾಠಿಯಲ್ಲಿ ಬರೆದ ಮಾಝೆ ಗಾಂವ ಮಾಝೆ ತೀರ್ಥ ಕೃತಿಯ ಕನ್ನಡ ಅನುವಾದವೇ ನನ್ನ ಊರು ಪುಣ್ಯಭೂಮಿ ಎಂಬ ಕೃತಿ. ಅಣ್ಣಾ ಹಜಾರೆಯವರು ಈ ಕೃತಿಯಲ್ಲಿ ತಮ್ಮ ಇಡೀ ಜೀವನದ ವೃತ್ತಾಂತ, ತಮ್ಮ ಸೈನ್ಯದಲ್ಲಿನ ಸೇವೆ, ಆದರ್ಶಗ್ರಾಮ ನಿರ್ಮಾಣದ ಅನುಭವಗಳು, ವಾಟರ್ ಶೆಡ್ ಡೆವ್ಹಲಪ್ಮೆಂಟ್ ಯೋಜನೆಯ ರೂಪುರೇಖೆ, ಮಾಹಿತಿ ಹಕ್ಕು ಕಾನೂನಿನ ರಚನೆಯ ಹೋರಾಟ, ಅಂಧಶ್ರದ್ದಾ ನಿರ್ಮೂಲನೆ, ವ್ಯಸನಮನುಕ್ತ ಗ್ರಾಮ, ಭ್ರಷ್ಟಾಚಾರ ವಿರೋಧಿ ಆಂದೋಲನ, ಸಕಾಲ ಕಾನೂನಿನ ರಚನೆಯ ಹೋರಾಟ, ಜನಲೋಕಪಾಲ ರಚನೆಯ ಹೋರಾಟ, ಲವಾಸಾ ಯೋಜನೆಯ ವಿರುದ್ಧ ಹೋರಾಟ, ಧಾನ್ಯಬ್ಯಾಂಕ್ ಸ್ಥಾಪನೆ ಹೀಗೆ ಹಲವಾರು ಮಹತ್ವದ ಕಾರ್ಯಗಳನ್ನು ಮಾಡಿದ ಅವರು ತಮ್ಮ ವಿಶಾಲ ಬದುಕಿನ ನಿರಂತರ ಸಂಘರ್ಷದ ಕಥೆಯನ್ನು ತುಂಬ ರೋಚಕವಾಗಿ ಬರೆದಿದ್ದಾರೆ. ಈ ಕೃತಿಯ ಓದು ಕನ್ನಡಿಗರಲ್ಲಿಯೂ ನೆಲ, ಜಲ, ಭಾಷೆ, ದೇಶ ಹಾಗೂ ಯುವಶಕ್ತಿಯ ಸರ್ವಾಂಗೀಣ ವಿಕಾಸದಲ್ಲಿ ಸಹಕಾರಿಯಾಗಬಲ್ಲದು, ದೇಶಹಿತಕ್ಕಾಗಿ ಸತ್ಯಾಗ್ರಹ, ಆಂದೋಲನ ಮಾಡುವ ಶಕ್ತಿಯನ್ನು ತುಂಬ ಬಲ್ಲದು ಎಂಬ ಉಮೇದಿನಿಂದ ಈ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ.
©2024 Book Brahma Private Limited.