`ಅಲೆಮಾರಿಯ ಅಂತರಂಗ’ ಕೃತಿಯು ಕುಪ್ಪೆ ನಾಗರಾಜ ಅವರ ಆತ್ಮಕಥೆಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕಪ್ಪು ಮೋಡಗಳು ಕರಗಿ ಭೂಮಿಗಿಳಿದ ದಿಕ್ಕಿನತ್ತ ಹಾರುವ ವಲಸೆ ಹಕ್ಕಿಗಳಂತೆ ಬದುಕು ಹುಡುಕಿ ಊರುಕೇರಿಗಳತ್ತ ಚದುರಿ ಹೋಗುವ ಅಲೆಮಾರಿ ಜನಾಂಗ. ಅವರ ಆಚಾರ, ವಿಚಾರ, ನಂಬಿಕೆ, ಮೂಢನಂಬಿಕೆಗಳೆಲ್ಲ ಶ್ರೀ ಕುಪ್ಪೆ ನಾಗರಾಜ ಅವರ ಆತ್ಮಕಥೆಯ ಕವಚದಲ್ಲಿ ಅನಾವರಣಗೊಂಡಿರುವುದು ವಿಶೇಷ. ಸಮುದಾಯವನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಪ್ರಯತ್ನ, ಬದಲಾವಣೆಯನ್ನು ಒಪ್ಪಿಕೊಳ್ಳಲಾಗದೆ ಗೊಂದಲಕ್ಕೆ ಸಿಕ್ಕಿಬೀಳುವ ಸಂಸ್ಕೃತಿ, ಅವರ ಅಸಹಾಯಕತೆ, ಸಂಕಷ್ಟ - ಸವಾಲುಗಳೆಲ್ಲ ಸಹಜ ನಿರೂಪಣೆಯಿಂದ ಓದುಗನ ಮನ ಕಲುಕುತ್ತವೆ. ಅಧ್ಯಯನದ ಹಿಡಿತಕ್ಕೆ ಎಂದೂ ಸುಲಭವಾಗಿ ತೆರೆದುಕೊಳ್ಳದ ಅಲೆಮಾರಿಗಳ ಬದುಕಿನ ಒಳನೋಟ ಸಮಾಜ ವಿಜ್ಞಾನಿಗಳಿಗೆ ಉಚಿತ ಉಡುಗೊರೆಯಾಗಬಹುದು. ಇದಲ್ಲದೆ, ಮೀಸಲಾತಿ ಏಕೆ ಬೇಕು? ಎಂದು ನಗರದ ಬೀದಿಗಳಲ್ಲಿ ನಿಂತು ಚರ್ಚಿಸುವ ವರ್ಗಕ್ಕೆ ಈ ಕೃತಿಯ ಅಂತರಾಳ ಉತ್ತರವಾಗಬಹುದು ಎನ್ನುವುದು ಇಲ್ಲಿ ವಿಶ್ಲೇಷಿತವಾಗಿದೆ.
©2024 Book Brahma Private Limited.