‘ಗಬಾಳ’ ಕನ್ನಡಕ್ಕೆ ಅನುವಾದವಾಗುತ್ತಿರುವ ಮರಾಠಿಯ ಮೂರನೆಯ ದಲಿತ ಆತ್ಮಕಥನ. ಈ ಮೊದಲು ಲಿಂಗಾಯತ ತಂದೆ-ಹರಿದನ ತಾಯಿಯಿಂದ ಜನ್ಮ ಪಡೆದ ಶರಣಕುಮಾರ ಲಿಂಬಾಳೆ ಅವರ ಅಕ್ರಮ ಸಂತಾನ(ಅಕ್ಕರ-ಮಾಶಿ), ಗಂಟೆಚೋರ ಲಕ್ಷ್ಮಣ ಗಾಯಕವಾಡ ಅವರ ಉಚಲ್ಯಾ(ಅನು-ಚಂದ್ರಕಾಂತ ಪೋಕಳೆ) ಕನ್ನಡದಲ್ಲಿ ಪ್ರಕಟವಾಗಿದ್ದು. ಈಗ ಬುಡುಬುಡುಕೆಯ ಜನಾಂಗದ ದಾದಾಸಾಹೇಬ ಮಲ್ಹಾರಿ ಮೋರೆ ಅವರ ಗಬಾಳ ಪ್ರಕಟವಾಗಿದೆ.
ಗಬಾಳ ಪದವನ್ನು ಉತ್ತರ ಗಡಿಯ ಕನ್ನಡಿಗರೂ ಬಳಸುತ್ತಾರೆ. ಮೂಲ ಹೆಸರನ್ನೇ ಈ ಅನುವಾದ ಕೃತಿಗೂ ಇಡಲಾಗಿದೆ. ಇಲ್ಲಿಯ ಭಾಷೆ, ಮಾತು-ಕತೆಗಳು ಅಲ್ಲಿಯ ಕನ್ನಡಿಗರ ಆಡುಮಾತುಗಳೇ ಆಗಿವೆ.ಇಲ್ಲಿಯ ಜತ್ತ, ಮಂಗಳವೇಢೆ ಇವು ಕರ್ನಾಟಕದ ಸೀಮೆಗೆ ಹೊಂದಿದ ಮಹಾರಾಷ್ಟ್ರದ ತಾಲೂಕುಗಳು ಇಲ್ಲಿಯ ಕನ್ನಡಿಗರು, ಬಳಸುವ ಮಾತುಗಳನ್ನೇ ಈ ಪುಸ್ತಕದಲ್ಲಿ ಬಳಸಲಾಗಿದೆ.
©2024 Book Brahma Private Limited.