ಕನ್ನಡ ರಂಗಭೂಮಿಯ ಪ್ರಮುಖ ಕಲಾವಿದ ಏಣಗಿ ಬಾಳಪ್ಪನವರ ಆತ್ಮಕಥನವಿದು. ಆ ದಿನದ ನಾಟಕ, ಅದರ ಗಳಿಕೆ, ಅವರು ಭೇಟಿಯಾದ ವ್ಯಕ್ತಿಗಳ ಕುರಿತು, ತಾವು ಭೇಟಿ ನೀಡಿದ ಊರು, ಸ್ಥಳಗಳ ಬಗ್ಗೆ ತಮ್ಮ ಆತ್ಮಕತೆಯದಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಕುಟುಂಬದ ಪ್ರೀತಿ; ರಂಗಸಂಸ್ಥೆಗಳೊಂದಿಗಿನ ಒಡನಾಟ; ಭಾಷಣ ಪ್ರಶಸ್ತಿಗಳು, ಹೀಗೆ ಮೂರು ಭಾಗಗಳಾಗಿ ರಂಗಯಾತ್ರೆಯ ನೆನಪುಗಳು ಈ ಕೃತಿಯಲ್ಲಿ ಆವರಿಸಿಕೊಂಡಿವೆ. ಬಾಳಪ್ಪ ಅವರ ನೆನಪುಗಳನ್ನು ಸ್ವತಃ ದಾಖಲಿಸಿದ್ದು, ಪಾರ್ಶ್ವವಾಯುವಿಗೆ ತುತ್ತಾದ ನಂತರ ರಂಗ ಚಟುವಟಿಕೆಯ ಅನುಭವಗಳನ್ನು ದಾಖಲು ಮಾಡಿದ್ದಾರೆ.
ನಾಟಕಕಾರ ರಾಮಕೃಷ್ಣ ಮರಾಠೆ ಅವರು 1958 ಮೇ 25 (ಸಿಂದಗಿ-ಬಿಜಾಪುರ) ಜನಿಸಿದರು. ಕನ್ನಡಲ್ಲಿ ಪಿಎಚ್.ಡಿ ಪದವೀಧರರು. ಕನ್ನಡ ಅಧ್ಯಾಪಕರು. ‘ಉತ್ತರ ಕರ್ನಾಟಕದ ರಂಗಭೂಮಿ, ಕೊಣ್ಣೂರ ನಾಟಕ ಕಂಪನಿ, ಈ ರಂಗಭೂಮಿಯ ಕನ್ನಡ ಸಂವೇದನೆ’ ಅವರ ಸಂಶೋಧನಾ ಕೃತಿಗಳು. ‘ರಾಮಧಾನ್ಯ, ದಾಸೋಹ; ಅಲ್ಲಮಲೀಲೆ’ ಅವರ ಪ್ರಮುಖ ನಾಟಕ. ‘ಬಿ.ಆರ್. ಅರಿಷಿಣಗೋಡಿ; ಬೆಳಗಾವಿ ಭಗೀರಥ; ವಿಶ್ವನಾಥ ಕತ್ತಿ’ ಅವರ ಜೀವನ ಚಿತ್ರಣ ಕೃತಿಗಳನ್ನು ಸಂಪಾದಿಸಿದ್ದಾರೆ. ‘ಹರಿಹರನ ನಾಲ್ಕು ರಗಳೆಗಳು, ನಾಟ್ಯಭೂಷಣ ಏಣಗಿ ಬಾಳಪ್ಪ, ವೃತ್ತಿ ರಂಗದ ಮಹತ್ತರ ನಾಟಕಗಳು’ ಅವರ ಸಂಪಾದಿತ ಕೃತಿಗಳು. ಅಲ್ಲದೆ ‘ದಕ್ಷಿಣದ ದೇಸೀ ದೇವರು ಶ್ರೀ ಖಂಡೋಬಾ; ಭವಿರ ...
READ MORE