'ನಾನು ಕಂಡ ಗೆಳೆಯರ ಗುಂಪು’ ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಶೇ. ಗೋ. ಕುಲಕರ್ಣಿ (ಶೇಷಗಿರಿರಾವ್ ಗೋವಿಂದರಾವ್ ಕುಲಕರ್ಣಿ) ಅವರ ಕೃತಿ. 1978-80ರ ಅವಧಿಯಲ್ಲಿ ಪ್ರಥಮ ಮುದ್ರಣವೇ ಮೂರು ಸಂಪುಟಗಳನ್ನು ಹೊಂದಿದೆ. ಮೇಲ್ನೋಟಕ್ಕೆ ಈ ಕೃತಿಯು ಆತ್ಮಕಥನ ಎಂಬಂತೆ ಕಾಣುತ್ತದೆ. ಶಾಂತಿನಿಕೇತನಕ್ಕೆ ಹೋದ ಲೇಖಕರು ರವೀಂದ್ರನಾಥ ಟ್ಯಾಗೋರ್ ಅವರಿಂದ ಪ್ರಭಾವಿತರಾಗಿ ಮುಂದೆ ’ಜಯ ಕರ್ನಾಟಕ’ ಪತ್ರಿಕೆಯಲ್ಲಿ ’ಗೆಳೆಯರ ಗುಂಪು’ ಧ್ಯೇಯೋದ್ಧೇಶಗಳನ್ನು ದಾಖಲಿಸಿದ್ದಾರೆ. ಈ ಗೆಳೆಯರ ಗುಂಪು ಸಂಪರ್ಕಕ್ಕೆ ಬಂದ ಮಾಸ್ತಿ, ಬೇಂದ್ರೆ, ಎಸ್.ಎಸ್.ಮಾಳವಾಡ, ಮಧುರಚೆನ್ನ, ಶಂಬಾ, ದೇವುಡು, ಅನಕೃ, ಪುತಿನ ಮುಂತಾದವರ ಬಗ್ಗೆಯೂ ಇಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲದೇ, ಪತ್ರಿಕೋದ್ಯಮ, ಪುಸ್ತಕದಂಗಡಿ, ಮುದ್ರಣಾಲಯ, ಸಾಹಿತ್ಯ ಪ್ರಚಾರ-ಪ್ರಸಾರ ಹೀಗೆ ಎಲ್ಲವೂಗಳ ಪ್ರಸ್ತಾವೂ ಇಲ್ಲಿದೆ.
ಶೇ. ಗೋ. ಕುಲಕರ್ಣಿ ಎಂದು ಪರಿಚಿತರಿರುವ ಧಾರವಾಡ ಗೆಳೆಯರ ಗುಂಪಿನ ಸದಸ್ಯ ಶೇಷಗಿರಿರಾವ ಗೋವಿಂದರಾವ ಕುಲಕರ್ಣಿ ಅವರು ಜನಿಸಿದ್ದು 1908ರಲ್ಲಿ. ಗದಗ ಜಿಲ್ಲೆಯ ಮುಂಡರಗಿಯಲ್ಲಿ ಜನಿಸಿದ ಅವರು ಸವಣೂರಿನಲ್ಲಿ ಹೈಸ್ಕೂಲು ಶಿಕ್ಷಣ ಮತ್ತು ಧಾರವಾಡದ ರಾಷ್ಟ್ರೀಯ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದರು. 1924ರಿಂದ 1928ರವರೆಗೆ ಶಾಂತಿನಿಕೇತನದಲ್ಲಿ ಉನ್ನತ ವ್ಯಾಸಂಗ ಮಾಡಿದ ಅವರು ವಿಶ್ವಕವಿ ರವೀಂದ್ರನಾಥ ಟಾಗೋರರ ಶಿಷ್ಯರಾಗಿದ್ದರು. 1928ರಲ್ಲಿ ಧಾರವಾಡದ ಗೆಳೆಯರ ಗುಂಪಿನ ಸಕ್ರಿಯ ಸದಸ್ಯರಾದ ಅವರು 'ಜಯ ಕರ್ನಾಟಕ' ಪತ್ರಿಕೆಯ ವ್ಯವಸ್ಥಾಪಕರಾಗಿ, ಪ್ರಚಾರಕರಾಗಿ ನಾಡಿನಾದ್ಯಂತ ಸಂಚರಿಸಿದರು; 1936ರಲ್ಲಿ ಸಾಧನಾ ಮುದ್ರಣಾಯಲಯ ಸ್ಥಾಪಿಸಿದರು; 'ಜೀವನ' ಮಾಸಪತ್ರಿಕೆಯ ಮುದ್ರಕರಾಗಿ, ಪ್ರಕಾಶಕರಾಗಿ ...
READ MORE