ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಆತ್ಮಕತೆ ಭಾಗ-2. -ಈ ಕೃತಿ.“ಸ್ಮೃತಿಪಟಲದಿಂದ-ಸಂಪುಟ-2”. ಡಾ. ಶಿವರಾಮ ಕಾರಂತ ಅವರು ತಮ್ಮ ಸಾಹಿತ್ಯಕ ಬದುಕಿನ ಸಾರ್ಥಕ 60 ವರ್ಷಗಳ ಸುದೀರ್ಘ ಅನುಭವಗಳನ್ನು ಸರಣಿ ಕೃತಿಗಳಲ್ಲಿ ದಾಖಲಿಸಿದ್ದರ ಪೈಕಿ ಈ ಕೃತಿಯು 2ನೇ ಸಂಪುಟವಾಗಿದೆ.
ಮಿತ್ರರೊಬ್ಬರು ತಮ್ಮ ಜೀವನಚರಿತ್ರೆ ಬರೆಯುವ ಉತ್ಸಾಹ ತೋರಿದಾಗ “ನೀವು ನನ್ನನ್ನು ಕೊಲ್ಲಬೇಕಿಲ್ಲ; ನನ್ನ ಆತ್ಮಹತ್ಯೆಯನ್ನು ನಾನೇ ಮಾಡಿಕೊಳ್ಳುತ್ತೇನೆ” ಎಂದು ಪರಿಹಾಸದಿಂದ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಈ ನಿಷ್ಠುರ ನುಡಿ, ನಿಲುವಿನ ವ್ಯಕ್ತಿ ಮೇಲಿನ ಪುಸ್ತಕಗಳಲ್ಲಿ ವಸ್ತುನಿಷ್ಠವಾಗಿ ಅಂತಹ ಪ್ರಯತ್ನ ಮಾಡಿದ್ದಾರೆ. ಆರಂಭಿಕ “ಬಾಳ್ವೆಯೇ ಬೆಳಕು’ ಕೃತಿಯಲ್ಲಿ ತಮ್ಮಜೀವನದೃಷ್ಟಿಯನ್ನು ಪ್ರತಿಪಾದಿಸಿದ್ದರೆ, 1950ರವರೆಗಿನ ಚಟುವಟಿಕೆ-ಅನುಭವಗಳನ್ನು “ಹುಚ್ಚು ಮನಸ್ಸಿನ ಹತ್ತು ಮುಖದ ಮೊದಲ ಆವೃತ್ತಿಯಲ್ಲಿ, ನಂತರದ ದಶಕದ ಅನುಭವಗಳನ್ನು ಎರಡನೇ ಆವೃತ್ತಿಯಲ್ಲಿ ಬರೆದು ಪ್ರಕಟಿಸಿರುವುದು ಕಾರಂತ ಅಧ್ಯಯನಕ್ಕೆ ಒಂದು ಬಹು ಮುಖ್ಯ ಆಕರ ಒದಗಿಸಿದೆ. ಅವರ ಕಾದಂಬರಿಗಳಷ್ಟೇ ಅಥವಾ ಅದಕ್ಕಿಂತಲೂ ಒಂದು ಕೈ ಮಿಗಿಲಾದ ಜನಪ್ರಿಯತೆಯನ್ನು ಈ ಆತ್ಮಕಥನಗಳು ಉಳಿಸಿಕೊಂಡಿದೆ. ಸಾಹಿತ್ಯ, ಲಲಿತಕಲೆ, ಹಾಗೂ ವ್ಯವಹಾರಗಳಿಗೆ ಸಂಬಂಧಿಸಿದ ಲೇಖಕರ ಆಸಕ್ತಿ ಹಾಗೂ ಪ್ರೇರಣೆಗಳು ಕಷ್ಟ-ಸುಖ, ಪ್ರಯೋಗಗಳ ಅನೇಕ ಸ್ವಾರಸ್ಯಕರ ಘಟನೆಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ಬೆಂಗಳೂರಿನ ರಾಜಲಕ್ಷ್ಮೀ ಪ್ರಕಾಶನವು 1978ರಲ್ಲಿ (ಪುಟ: 387) ಈ ಕೊರತೆಯನ್ನು ಮೊದಲ ಬಾರಿಗೆ ಹಾಗೂ 1986ರಲ್ಲಿ ಪುನರ್ ಪ್ರಕಟಿಸಿತ್ತು.
©2024 Book Brahma Private Limited.