ಕೊಟ್ಟೂರಪ್ಪ ಕನ್ನಡದ ಪ್ರಮುಖ ನಟರು. ಕನ್ನಡ ರಂಗಭೂಮಿಯ ಅವಿಭಾಜ್ಯ ಅಂಗವಾಗಿ ಕಾಣಿಸಿಕೊಂಡ ಇವರು ಸುಮಾರು ಏಳೆಂಟು ವರ್ಷಗಳ ಕಾಲ ಕನ್ನಡ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದಾರೆ. ಉತ್ತಮ ಗಾಯಕರಾಗಿ ,ಶ್ರೇಷ್ಠ ನಟರಾಗಿ ಕಾಣಿಸಿಕೊಂಡವರು. ಡಾ. ಕೆ.ಬಿ.ಪ್ರಭುಪ್ರಸಾದ್ ಅವರು ಕೊಟ್ಟೂರಪ್ಪ ಅವರ ಜೀವನ ವೃತ್ತಾಂತವನ್ನು ಅವರ ಮೂಲಕವೇ ಪಡೆದುಕೊಂಡು , ನಂತರ ಅದನ್ನೆ ಆತ್ಮ ಕಥನದಲ್ಲಿ ರೂಪಿಸಿಕೊಂಡಿದ್ದಾರೆ.
ಸುಗಮ ಸಂಗೀತ ಗಾಯಕ ಪ್ರಭುಪ್ರಸಾದರು ಮೂಲತಃ ದಾವಣಗೆರೆಯವರು. ತಂದೆ ಬಿ.ಎಸ್. ಕುರುವತ್ತಿ ಮತ್ತು ತಾಯಿ ಸರ್ವಮಂಗಳಾ. ದಾವಣಗೆರೆಯಲ್ಲಿಯೇ ಪ್ರಾರಂಭಿಕ ಶಿಕ್ಷಣ, ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜಿನಲ್ಲಿ ಅಧ್ಯಯನ ನಡೆಸಿ (ಮುಂಬೈ ವಿ.ವಿ.) ಎಂ.ಎ. ಪೂರ್ಣಗೊಳಿಸಿದರು. ಶಿವಮೊಗ್ಗ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಯುವರಾಜ ಕಾಲೇಜಿನಲ್ಲಿ ರೀಡರ್ ಆಗಿ, ಮಹಾರಾಣಿ ಕಾಲೇಜಿನಲ್ಲಿ ಪ್ರೊಫೆಸರಾಗಿ, ಚಿತ್ರದುರ್ಗ, ತುಮಕೂರಿನ ಸರಕಾರಿ ಪ್ರಥಮ ದರ್ಜೆ ಸೈನ್ಸ್ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸುಗಮ ಸಂಗೀತ ಗಾಯಕರಾಗಿ, ಸಾಹಿತ್ಯ, ಸಂಗೀತ, ನಾಟಕ, ಹಾಸ್ಯ ಹವ್ಯಾಸಗಳಾಗಿವೆ. ದೇಗುಲಗಳ ದಾರಿಯಲ್ಲಿ (ಪ್ರವಾಸ ಕಥನ), ನಾದಸೇತು ಮತ್ತು ಇತರ ...
READ MORE