ವಿಧಾನಸಭೆಯ ವಿರೋಧ ಪಕ್ಷದ ನಡೆ- ಓರೆಕೋರೆಗಳನ್ನು ನಾಟಕದ ಮೂಲಕ ಟೀಕಿಸಿ ತಿದ್ದಲು ಯತ್ನಿಸುತ್ತಿದ್ದವರು ‘ಮಾಸ್ಟರ್ ಹೀರಣ್ಣಯ್ಯ’. ತಮ್ಮ ವಿಶಿಷ್ಟ ವಿಡಂಬನಾತ್ಮಕ ಮಾತಿನ ಶೈಲಿಯ ಮೂಲಕವೇ ಕನ್ನಡ ರಂಗಭೂಮಿಯಲ್ಲಿ ಹೊಸತನವನ್ನು ಸಕ್ರಿಯವಾಗಿ ಪ್ರಯೋಗಿಸಿ ಜನಮಾನಸಕ್ಕೆ ಹತ್ತಿರವಾದರು. ಇಂತಹ ವಿಶಿಷ್ಟ ವ್ಯಕ್ತಿತ್ವ ಉಳ್ಳ ಆತ್ಮ ವೃತ್ತಾಂತದ ಕೃತಿ ‘ನಾನು ಮಾಸ್ಟರ್ ಹಿರಣ್ಣಯ್ಯ’.