ಕವಿ, ಲೇಖಕ ಎಚ್.ಎಸ್. ಶಿವಪ್ರಕಾಶ್ ಅವರ ’ಬತ್ತೀಸರಾಗ’ ಕೃತಿಯು ಅವರ ಆಧ್ಯಾತ್ಮಿಕ ಆತ್ಮ ಕಥಾನಕ. ಲೇಖಕರ ಬದುಕಿನ ಆಧ್ಯಾತ್ಮಿಕತೆಯ ಹುಡುಕಾಟವನ್ನು ಈ ಕೃತಿ ತೆರೆದಿಡುತ್ತದೆ. ಅವಧೂತ, ಸೂಫಿ, ಮತ್ತು ಒಬ್ಬ ಕ್ರಿಶ್ಚಿಯನ್ ಭಕ್ತ – ಈ ಮೂವರೂ ವ್ಯಕ್ತಿಗಳ ಅನುಭವ ವ್ಯಕ್ತಿತ್ವದ ಧೋರಣೆ ಈ ಕೃತಿಯಲ್ಲಿ ಚರ್ಚಿತವಾಗುವ ಮುಖ್ಯ ಅಂಶವಾಗಿದೆ. ಓದುಗರ ಆಧ್ಯಾತ್ಮ ಜಗತ್ತಿನ ಹುಡುಕಾಟಕ್ಕೆ ಈ ಕೃತಿ ಸದಾ ತೆರೆದುಕೊಳ್ಳುವ ಜಿಜ್ಞಾಸೆಯನ್ನು ಹುಟ್ಟಿಸುತ್ತದೆ.
ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು. ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...
READ MORE