ಎನ್.ಪಿ. ಶಂಕರನಾರಾಯಣರಾವ್ ಅವರ ಆತ್ಮಕತೆ 'ಒಂದೇ ಕಾಲು ಮೂರು ಕೋಲು'. ನಾಡಿನ ಹಿರಿಯ ಲೇಖಕರಲ್ಲಿ ಒಬ್ಬರಾದ ಎನ್.ಪಿ.ಶಂಕರನಾರಾಯಣರಾವ್, ಸೂಕ್ಷ್ಮ ಸಾಹಿತ್ಯದ ಸಂವೇದನೆ, ವಸ್ತುನಿಷ್ಠ ವಿಮರ್ಶಾದೃಷ್ಠಿ, ವ್ಯಾಪಕ ಅಧ್ಯಯನ ಮತ್ತು ತಲಸ್ಪರ್ಶಿ ವಿಶ್ಲೇಷಣೆ ಎಲ್ಲವನ್ನು ಆಳವಾಗಿ ಮೈಗೂಡಿಸಿಕೊಂಡವರು.
ವಿವಿಧ ಮಾನಸಿಕ ಶಾಸ್ತ್ರಗಳ ಮಾನದಂಡಗಳನ್ನು, ಸಿದ್ಧಾಂತಗಳನ್ನು, ತಾತ್ವಿಕ ನೆಲೆಗಳನ್ನು ಕಂಡುಂಡು ಅನುಭವಿಸಿರುವ ಮತ್ತು ಅದ್ಭುತ ಎನಿಸುವ ಸಮಗ್ರ ಜೀವನಾನುಭವ ಹೊಂದಿರುವ ಲೇಖಕರು. ಈ ಕೃತಿ ಅವರ ಬದುಕು-ಬರೆಹಗಳನ್ನು ಒಳಗೊಂಡಿದೆ.
.ಎನ್.ಪಿ. ಶಂಕರ ನಾರಾಯಣ ರಾವ್ ಅವರು 1928ರ ಆಗಸ್ಟ್ 03ರಂದು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ತಂದೆ ಪಟ್ಟಾಭಿರಾಮಯ್ಯ ಹಾಗೂ ತಾಯಿ ಅಚ್ಚಮ್ಮ. ತಂದೆ ಸಬ್ ರಿಜಿಸ್ಟ್ರಾರ್ ಇದ್ದರು. ವರ್ಗಾವಣೆ ಆದ ಕಡೆ ಇವರ ವಿದ್ಯಾಭ್ಯಾಸ ಅನಿವಾರ್ಯವಾಯಿತು. ಬೆಂಗಳೂರಿನ ಶ್ರೀರಾಮಪುರದಲ್ಲಿ ಪ್ರಾಥಮಿಕ ಶಿಕ್ಷಂ, ಕನಕಪುರದ ಕಾನಕಾನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆನೇಕಲ್ ಹಾಗೂ ಬಸವನಹಳ್ಳಿಯಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಸ್ವಾತಂತ್ಯ್ರ ಚಳವಳಿ ಆರಂಭವಾಗಿ, ಜೈಲುವಾಸ ಅನುಭವಿಸಿದರು. ಮೈಸೂರು ಸ್ಟೂಡೆಂಟ್ಸ್ ಯೂನಿಯನ್ ಸ್ಥಾಪಿಸಿ ಎಡ ಪಂಥೀಯ ವಿಚಾರಗಳೊಂದಿಗೆ ಹೋರಾಟ ನಡೆಸಿದರು. ಮೈಸೂರು ಪುರಸಭಾ ಕಾರ್ಮಿಕ ಸಂಘದ ...
READ MORE