ದ.ಕ. ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ ಸೇಂಥಿಲ್ ಅವರು ತಮ್ಮ ವೃತ್ತಿಗೆ 2019 ರಲ್ಲಿ ರಾಜೀನಾಮೆ ನೀಡಿದ್ದು, ಅಂದಿನ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿತ್ತು. ಸಾರ್ವಜನಿಕ ವಲಯದಲ್ಲಿಯ ಈ ಸಂಶಯಗಳ ನಿವಾರಣೆಗೆ ಅವರು ಬರೆದ ಕೃತಿಯೇ - ‘ನಾನೇಕೆ ರಾಜೀನಾಮೆ ನೀಡಿದೆ’. ದುರಾತಳಿತದಲ್ಲಿ ಒಬ್ಬ ಸಭ್ಯ ನಾಗರಿಕ ಅಧಿಕಾರದಲ್ಲಿ ಮುಂದುವರಿಯುವುದು ಸರಿಯಲ್ಲ’ ಎಂಬ ಅಂದಿನ ಅವರ ಹೇಳಿಕೆಗೆ ಈ ಕೃತಿಯಲ್ಲಿ ಸಮರ್ಥನೆಗಳನ್ನು ನೀಡಿದ್ದಾರೆ. ಲೇಖಕ ಎ.ಎಸ್. ಪುತ್ತಿಗೆ ಅವರ ನಿಗೂಢ ಅಕ್ಷರಗಳು-ಕೃತಿಯೂ ಸಹ ಇದೇ ಪುಸ್ತಕದಲ್ಲಿ ಅಳವಡಿಸಲಾಗಿದೆ.
ತಮಿಳುನಾಡು ಮೂಲದ ಶಶಿಕಾಂತ ಸೇಂಥಿಲ್ ಅವರು 2009ನೇ ವರ್ಷದ ಐಎಎಸ್ ಅಧಿಕಾರಿ. ಎಂಜಿನಿಯರಿಂಗ್ ಪದವೀಧರರು. ಕರ್ನಾಟಕ ರಾಜ್ಯ ಗಣಿ ಹಾಗೂ ಭೂವಿಜ್ನಾನ ಇಲಾಖೆಯ ನಿರ್ದೆಶಕರಾಗಿ ಹಾಗೂ ರಾಜ್ಯದ ವಿವಿಧ ಜಿ.ಪಂ. ಕಾರ್ಯ ನಿರ್ವಾಹಕಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗ (2019) ರಾಜೀನಾಮೆ ನೀಡಿದ್ದರು. ‘ನಾನೇಕೆ ರಾಜೀನಾಮೆ ನೀಡಿದೆ’ ಎಂಬ ಬಗ್ಗೆ ಸಮರ್ಥನೆಗಳನ್ನು ಒಳಗೊಂಡ ಆತ್ಮಕಥೆಯನ್ನು ಈ ಕೃತಿ ಒಳಗೊಂಡಿದೆ. ...
READ MORE