‘ವೀಣೆಯ ನೆರಳಿನಲ್ಲಿ’ ಮೈಸೂರಿನ ಹೆಸರನ್ನು ವೀಣೆಯೊಂದಿಗೆ ಸಮೀಕರಿಸಿದ ದೊರೆಸ್ವಾಮಿ ಅಯ್ಯಂಗಾರ್ ಆತ್ಮಕಥನವಿದು. ಅವರ ಕಛೇರಿಗಳೆಂದರೆ ಮುಗಿಬಿದ್ದು ಹೋಗುತ್ತಿದ್ದ ಶೋತೃಗಳನ್ನು ಅಲೌಕಿಕ ಆನಂದಾನುಭವದಿಂದ ತೇಲಿಸುವ ಅಮೋಘ ಪ್ರತಿಭೆ ಅವರಲ್ಲಿತ್ತು. ಲೆಕ್ಕವಿಲ್ಲದಷ್ಟು ಪ್ರಶಸ್ತಿ - ಪುರಸ್ಕಾರಗಳು ಲಭಿಸಿದ್ದರೂ, ಬಹಳ ಎತ್ತರಕ್ಕೇರಿ ನಿಂತರೂ ಅದೆಲ್ಲವೂ ವೀಣೆಯ ನೆರಳಿನಲ್ಲಿಯೇ ಸಾಧಿಸಿದ್ದೆಂದು ವಿನೀತ ಭಾವದಿಂದ ಅವರ ಜೀವನವನ್ನು ದಾಖಲಿಸಿದ್ದಾರೆ.
ಕನ್ನಡ ಬರಹಗಾರ್ತಿ ಭಾರತೀ ಕಾಸರಗೋಡು ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಮೊದಲನೆಯ ಕೃತಿ ವೀಣೆಯ ನೆರಳಲ್ಲಿ, ಡಾ. ವಿ.ದೊರೆಸ್ವಾಮಿ ಅಯ್ಯಂಗಾರ್ ಅವರ ಜೀವನವನ್ನು ಕುರಿತದ್ದು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮತ್ತು ಅತ್ತಿಮಬ್ಬೆ ಬಹುಮಾನಗಳು ದಕ್ಕಿವೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತಿಯವರ ಇತರ ಪ್ರಕಟಿತ ಪುಸ್ತಕಗಳು ಚಂದನ (ಪ್ರಬಂಧ ಸಂಕಲನ), ರಾಸದರ್ಶನ (ತಂದೆ ಶ್ರೀ ಸಮೇತನಹಳ್ಳಿ ರಾಮರಾಯರಿಗೆ ಅರ್ಪಿಸಿದ ಅಭಿನಂದನ ಗ್ರಂಥ), ಜೀವಿ: ಜೀವ--ಭಾವ (ವಿದ್ವಾಂಸ ಶ್ರೀ ಜಿ. ವೆಂಕಟಸುಬ್ಬಯ್ಯ ಅವರ ಸಂಕ್ಷಿಪ್ತ ಜೀವನ ಚರಿತ್ರೆ), ಮತ್ತು ಬಂಧಬಂಧುರ (ಸಂಪಾದಿತ ...
READ MORE