ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಶೆಟ್ಟೀಕೆರೆ ನಿವಾಸಿ ಹಾಗೂ ಸ್ವಾತಂತ್ಯ್ರ ಹೋರಾಟಗಾರರಾದ ಸಿ.ಎಸ್.ನಾರಾಯಣ ರಾವ್ ಅವರು ತಮ್ಮ ಜೀವನ ಸಾಧನೆ, ಅನುಭವಗಳನ್ನು ಕುರಿತು ಬರೆದ ಕೃತಿ ಇದು. ಹಿರಿಯ ಸ್ವಾತಂತ್ಯ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಕೃತಿಯ ಬೆನ್ನುಡಿಯಲ್ಲಿ ’ ಅನ್ಯಾಯದ ವಿರುದ್ಧ ಎಸ್. ನಾರಾಯಣ ಸ್ವಾಮಿ ಅವರು ಹೋರಾಟ ಮನೋಭಾವ ನಿರಂತರ. ಕಡು ಬಡವರಿಗೆ, ಅಂಗವಿಕಲರಿಗೆ, ದುರ್ಬಲರಿಗೆ ಸರ್ಕಾರಿ ಸೌಲಭ್ಯ ಒದಗಿಸುವಲ್ಲಿಯೂ ಅವರು ಕಾರ್ಯತತ್ಪರರು. ಮನಸ್ಸು ಮಾಡಿದರೆ ಒಬ್ಬೊಬ್ಬರು ಏನೆಲ್ಲಾ ಸಾಧಿಸಬಹುದು ಎಂಬುದನ್ನು ಅವರು ತಮ್ಮ ಜೀವನ ಮೂಲಕ ಸಾಧಿಸಿ ತೋರಿದ್ದಾರೆ. ಇಂದಿನ ಬಹುತೇಕ ಸಮಸ್ಯೆಗಳಿಗೆ ಯುವಕರು ಸ್ಪಂದಿಸಬೇಕು ಎಂಬುದು ಅವರ ಆಶಯವಾಗಿದೆ ಎಂದು ಪ್ರಶಂಸಿಸಿದ್ದಾರೆ.
ಸಿ.ಎಸ್. ನಾರಾಯಣ ರಾವ್ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಶೆಟ್ಟೀಕೆರೆ ಗೇಟ್ ನಿವಾಸಿ ಹಾಗೂ ಸ್ವಾತಂತ್ಯ್ರ ಹೋರಾಟಗಾರರು. ಚಿಕ್ಕನಾಯಕನಹಳ್ಳಿಯಲ್ಲಿ ದೇಶೀಯ ವಿದ್ಯಾಶಾಲೆ ಕಟ್ಟಡ ನಿರ್ಮಾಣದಲ್ಲಿ ಇವರ ಪಾತ್ರ ಪ್ರಮುಖ. ಕಡು ಬಡವರಿಗೆ, ಅಂಗವಿಕಲರಿಗೆ, ದುರ್ಬಲರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುತ್ತಾ, ಅನ್ಯಾಯದ ವಿರುದ್ಧ ಹೋರಾಡುತ್ತಾ ಬಂದಿದ್ದಾರೆ. ...
READ MORE