ನೆನಪಿನ ನೌಕೆ ಎಂಬ ಈ ಕೃತಿಯೂ ನಾಡಿನ ಹಿರಿಯ ಪತ್ರಕರ್ತರಾದ “ಶ್ರೀ ಎಸ್. ಪಟ್ಟಾಭಿರಾಮನ್”, ಅವರ ವಿವಿಧ ಲೇಖನಗಳ ಒಂದು ಗುಚ್ಚ. 19ನೇ ಶತಮಾನದಲ್ಲಿ ಅಭಿವೃದ್ಧಿಯ ಹೆಸರಲ್ಲಿ ಮೈಸೂರು ಪ್ರಾಂತ್ಯದಲ್ಲಿ ತಲೆಎತ್ತಿದ ಹಲವು ವಾಣಿಜ್ಯ ಸಂಸ್ಥೆಗಳು , ಅವುಗಳಿಂದ ಆದ ದುಷ್ಪರಿಣಾಮ ಇವೆಲ್ಲದರ ಕುರಿತು ಈ ಕೃತಿಯು ಓದುಗರಿಗೆ ಮನವರಿಕೆ ಮಾಡಿಕೊಡುತ್ತದೆ. ಮೈಸೂರು ಪ್ರಾಂತ್ಯದ ,ಮಹನೀಯರ ಬಗ್ಗೆ ಈ ಕೃತಿಯು ಸ್ಪಷ್ಟಪಡಿಸುತ್ತಿದೆ. ಈ ಕೃತಿಯಲ್ಲಿ ಒಳಗೊಂಡಿರುವ ಎಲ್ಲಾ ಲೇಖನಗಳು ತುಂಬಾ ಮಹತ್ವದ್ದಾಗಿದ್ದು ಐತಿಹಾಸಿಕವಾಗಿದೆ.
ಎಸ್. ಪಟ್ಟಾಭಿರಾಮನ್ ಹಿರಿಯ ಪತ್ರಕರ್ತರು. ಮೈಸೂರಿನವರಾದ ಎಸ್. ಪಟ್ಟಾಭಿರಾಮನ್ ಅವರು ಚಾಮರಾಜನಗರದ ಸರಗೂರಿನಲ್ಲಿ 1934 ರಲ್ಲಿ ಜನಿಸಿದರು. ಇವರು ಪತ್ರಿಕೋದ್ಯಮ ಎಂ.ಎ ಮುಗಿಸಿ, ಪ್ರಜಾವಾಣಿ ಮೈಸೂರು ಪತ್ರಿಕೆಯಲ್ಲಿ 25 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರಾದೇಶಿಕ ವಿಶೇಷ ವರದಿಗಾರರಾಗಿ ಹತ್ತು ವರ್ಷ ಕಾರ್‍ಯ ನಿರ್ವಹಿಸಿದ್ದಾರೆ. ಸುಮಾರು 45 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕೃಷಿ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಲಭಿಸಿದೆ. ಭಾರತ ಸೇವಾದಳ, ರಾಷ್ಟ್ರೀಯ ಅಂಧರ ಒಕ್ಕೂಟದಂಥ ಸಾಮಾಜಿಕ ಸೇವೆಯಲ್ಲೂ ಗುರುತಿಸಿಕೊಂಡಿದ್ದರು. ಶೈಕ್ಷಣಿಕ ಸಾಮಾಜಿಕ ಸಂಘ ಸಂಸ್ಥೆಗಳ ಕ್ರಿಯಾಶೀಲ ...
READ MORE