‘ಬೊಪ್ಪ ನನ್ನನ್ನು ಕ್ಷಮಿಸು’ ಲೇಖಕ ಉದಯಕುಮಾರ್ ಹಬ್ಬು ಅವರ ಆತ್ಮಚರಿತ್ರೆ. ಈ ಕೃತಿಗೆ ಲೇಖಕ ಡಾ.ಬಿ. ಜನಾರ್ದನ ಭಟ್ ಬೆನ್ನುಡಿ ಬರೆದಿದ್ದಾರೆ. ‘ಉಡುಪಿ ಜಿಲ್ಲೆಯ ಮುಂಡ್ಕೊರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕೆಲಸ ಮಾಡಿ, ನಿವೃತ್ತರಾಗಿ ಈಗ ದ.ಕ.ದ ಕಿನ್ನಿಗೋಳಿಯಲ್ಲಿ ನೆಲೆಸಿರುವ ಸಾಹಿತಿ ಉದಯಕುಮಾರ್ ಹಬ್ಬು ಅವರ ಬಾಲ್ಯಕಾಲ ಕಥನ ‘ಬೊಪ್ಪ ನನ್ನನ್ನು ಕ್ಷಮಿಸು’ ಒಂದು ಅಪರೂಪದ ಕೃತಿ ಎನ್ನುತ್ತಾರೆ ಡಾ. ಜನಾರ್ದನ ಭಟ್. ಉದಯಕುಮಾರ್ ಹಬ್ಬು ಅವರು ಏಳನೆಯ ತರಗತಿಯವರೆಗೆ ಬಾಲ್ಯವನ್ನು ಕಳೆದದ್ದು ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ. ಅವರ ಅಪ್ಪ ನಿವೃತ್ತ ಶಾನುಭೋಗರಾಗಿದ್ದರು. ಗಾಂಧೀವಾದಿಯಾಗಿದ್ದು ಅಡ್ಡದಾರಿಯಲ್ಲಿ ಆಸ್ತಿಪಾಸ್ತಿ ಮಾಡದೆ ಬಾಡಿಗೆ ಮನೆಯಲ್ಲಿಯೇ ಬದುಕು ಕಳೆದವರು. ಈ ಆತ್ಮಕಥನವು ಪ್ರಚ್ಛನ್ನವಾಗಿ ಅವರ ಬದುಕಿನ ವ್ಯಾಖ್ಯಾನವಾಗಬಾರದು ಎಂಬ ಗೌರವದಿಂದ ಹಬ್ಬು ಅವರು ಈ ಶೀರ್ಷಿಕೆಯನ್ನಿರಿಸಿದ್ದಾರೆ.
©2024 Book Brahma Private Limited.