ಅಧ್ಯಾತ್ಮ ಚಿಂತಕಿ ವೀಣಾ ಬನ್ನಂಜೆ ಅವರ ಕೃತಿ-ಹುಡುಕಾಟ. ತಮ್ಮ ಬದುಕಿನ ಅನುಭವ ಹಾಗೂ ಅನುಭಾವಗಳನ್ನು ದಾಖಲಿಸಿದ ಕೃತಿ. ಲೇಖಕರ ಗುರು ಸತ್ಯಕಾಮ ಅವರೊಂದಿಗೆ ಒಡನಾಟದ ಪರಿಣಾಮವಾಗಿ ಕಂಡುಕೊಂಡ ಅರಿವಿನ ವಿಸ್ತಾರ ಹಾಗೂ ಆಳವನ್ನು ಲೇಖಕರು ಇಲ್ಲಿ ದಾಖಲಿಸಿದ್ದಾರೆ. ಒಂದು ರೀತಿಯಲ್ಲಿ ಅವರು ತಮ್ಮಅಧ್ಯಾತ್ಮಿಕ ಜೀವನದ ಆತ್ಮಕಥೆಯನ್ನು ಬರೆದಂತಿದೆ.
ವೀಣಾ ಬನ್ನಂಜೆ ಅವರು ಮೂಲತಃ ಉಡುಪಿ ಜಿಲ್ಲೆಯವರು. ಇವರ ತಂದೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು. ಎಚ್ಚರದ ಕನಸು (ಕಥಾ ಸಂಕಲನ), ಅಕ್ಕಮಹಾದೇವಿಯ ದೈ (ವೈಚಾರಿಕ) ಸಂತೆಯಲ್ಲೊಂದು ಮನೆ ೨೦೧೧ (ಅಂಕಣ ಬರಹ ಕೃತಿಗಳನ್ನು ವೀಣಾ ಬನ್ನಂಜೆ ಪ್ರಕಟಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಕಾವ್ಯಾನಂದ ಪುರಸ್ಕಾರಗಳು ಇವರಿಗೆ ಸಂದಿದೆ. ...
READ MORE