ಲೇಖಕ ಡಾ. ಎನ್. ಆರ್. ರಮೇಶ ಅವರು ಸ್ವತಃ ಭೂವಿಜ್ಞಾನಿಯಾಗಿದ್ದು, ಭೂ ವಿಜ್ಞಾನಿ ಯೊಬ್ಬರ ಆತ್ಮಕತೆಯಡಿ ತಮ್ಮ ಅನುಭವಗಳನ್ನು ದಾಖಲಿಸಿದ್ದೇ ಈ ಕೃತಿ-’ನೆನಪಿನ ನಿಕ್ಷೇಪ’.
ಭಾರತೀಯ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದ ಲೇಖಕರು, ಭೂಕಂಪನ ಸೇರಿದಂತೆ ಪ್ರಾಕೃತಿಕ ವಿಕೋಪಗಳ ಬಗ್ಗೆ ಅಧ್ಯಯನ ಮಾಡಿದವರು. ಸುಮಾರು 35ಸಾವಿರ ವರ್ಷಗಳ ಹಿಂದೆ ತ್ರಿಪುರ ಸುತ್ತಮುತ್ತ ಶಿಲಾಯುಗದ ಮಾನವನಿದ್ದ ಕುರುಹುಗಳನ್ನು ಮೊದಲ ಬಾರಿಗೆ ಸಂಶೋಧಿಸಿದವರು. ಭೂವಿಜ್ಞಾನ ಹಾಗೂ ಇತಿಹಾಸದ ಸಂಶೋಧನೆ ಎರಡನ್ನೂ ಸಮಾನವಾಗಿ ಕಂಡು, ಅವುಗಳಲ್ಲಿ ಪ್ರಭುತ್ವ ಸಾಧಿಸಿದ್ದು, ಈ ಕುರಿತಂತೆ ತಮ್ಮ ಅನುಭವಗಳನ್ನು ದಾಖಲಿಸಿದ ಕೃತಿ ಇದು. ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಕೃತಿಯ ಮುನ್ನುಡಿಯಲ್ಲಿ ಲೇಖಕರ ಸಂಶೋಧನಾ ದೃಷ್ಟಿಯನ್ನು ಪ್ರಶಂಸಿಸಿದ್ದಾರೆ.
©2024 Book Brahma Private Limited.