ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಆತ್ಮಕಥೆ-ಸಂಕ್ರಾಂತಿ. ಸಾಹಿತಿ ಡಾ. ದೇ.ಜ.ಗೌ ಬೆನ್ನುಡಿ ಬರೆದು ‘ಸಂಕ್ರಾಂತಿ-ಆತ್ಮಕಥೆ, ಹಳ್ಳಿಯ ಮಕ್ಕಳೆಲ್ಲರೂ ಓದಬೇಕಾದ ಗ್ರಂಥ. ಅಜ್ಞಾನ ತುಂಬಿತುಳುಕುತ್ತಿದ್ದ ಸಮಾಜದಲ್ಲಿ ನಿರಕ್ಷರಕುಕ್ಷಿಗಳ ಉದರದಲ್ಲಿ ಹುಟ್ಟಿ, ದನಕುರಿಗಳ ಕೊಟ್ಟಿಗೆಯಲ್ಲಿ ಬೆಳೆದು, ಬಡತನದ ಬೇಗೆಯಲ್ಲಿ ಬೇಯುತ್ತಾ, ನಾಗರಿಕ ಸಮಾಜ ಸೈ ಎನ್ನುವಂತೆ ಮೇಲೇರಿದ್ದೇ ಆಶ್ಚರ್ಯದ ಸಂಗತಿ. ಹಳ್ಳಿಯ ಹೈದನೊಬ್ಬ ನಟನಾಗಿ, ನಿರ್ದೇಶಕನಾಗಿ, ಸಂಪಾದಕರಾಗಿ, ಹಲವು ಸಂಸ್ಥೆಗಳ ಸಂಘಟಕರಾಗಿ, ನಾಟಕ, ಅಭಿನಯ, ಕಾದಂಬರಿಕಾರರಾಗಿ, ಕತೆಗಾರರಾಗಿ, ಪುಸ್ತಕ ಪ್ರಕಾಶಕರಾಗಿ ಕಲೆಯ ಇತಿಹಾಸದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದು ವಿಸ್ಮಯದ ಸಂಗತಿ ಎಂದು ಪ್ರಶಂಸಿಸಿದ್ದಾರೆ.
ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಿಡಸಾಲೆ (ಜನನ: 05-02-1951) ಗ್ರಾಮದವರು. ತಂದೆ- ಮುಳವಾಗಲಯ್ಯ, ತಾಯಿ- ನಿಂಗಮ್ಮ. ನಿಡಸಾಲೆಯಲ್ಲಿ ಪ್ರಾಥಮಿಕ, ಹುಲಿಯೂರುದುರ್ಗದಲ್ಲಿ ಪ್ರೌಢಶಾಲೆಯವರೆಗೆ ವ್ಯಾಸಂಗ ಪೂರ್ಣಗೊಳಿಸಿದರು. 1968ರಲ್ಲಿ ಬೆಂಗಳೂರಿನ ಐ.ಟಿ.ಐ.ನಲ್ಲಿ ತರಬೇತಿ ಪಡೆದು, 1969ರಿಂದ ಕೃಷಿ ಇಲಾಖೆಯಲ್ಲಿ ಉದ್ಯೋಗ ಆರಂಭಿಸಿದರು. ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಪಿ.ಯು.ಸಿ ತೇರ್ಗಡೆ ಯಾಗಿ ಬಿ.ಕಾಂ.ಗೆ ಸೇರ್ಪಡೆಯಾದರು. ಹಿರಿಯ ಸಾಹಿತಿ ಬಿ.ಜಿ. ಸತ್ಯಮೂರ್ತಿಯವರ ಒಡನಾಟದಲ್ಲಿ 1971ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಅವರು ಸಣ್ಣ ಕಥೆ, ನಾಟಕ, ಕಾದಂಬರಿ ಸೇರಿದಂತೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಕೃತಿಗಳು: ಗೊಲ್ಲಳ್ಳಿ ತೋಟ’, ‘ಸಾಧನೆಯ ...
READ MORE