‘ನೆನಪಿನ ಬಿಂಬಗಳು’ ಎಂ. ವಿ. ಭಟ್ ಅವರ ಆತ್ಮಕಥನವಾಗಿದೆ. ಮಿತ್ತೂರು ದಂಪತಿಗಳು ಜೀವನದೂದ್ದಕೂ ಬದುಕನು ಗಂಭಿರವಾಗಿ ಜೀವನ ನಡೆಸುವ ಜೀವನಗಾಥೆಯ ಬಗ್ಗೆ ಈ ಆತ್ಮಕಥನದಲ್ಲಿ ತಿಳಿಸಲಾಗಿದೆ.
ಹೊಸತು-2002-ಮಾರ್ಚ್
ಜನಜೀವನ ಸಾಹಿತ್ಯ ಸದನ, ಮೇದರಹಳ್ಳಿ, ಬೆಂಗಳೂರು-90 ಇದೊಂದು ಆತ್ಮಕಥೆ ಅಥವಾ ಆತ್ಮಾವಲೋಕನ. ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶ್ರೀ ಮಿತ್ತೂರು ದಂಪತಿಗಳು ಜೀವನದುದ್ದಕ್ಕೂ ಬದುಕನ್ನು ಬಹು ಗಂಭೀರವಾಗಿ, ಸೂಕ್ಷ್ಮವಾಗಿ ಅವಲೋಕಿಸುತ್ತ ಹೆಜ್ಜೆ ಹೆಜ್ಜೆಗೂ ಸಮಾಜದಿಂದ ಪಾಠ ಕಲಿತವರು. ಈ ಕಥನದ ಮೂಲಕ ತಮ್ಮ ಸುದೀರ್ಘ ಬಾಳಿನಲ್ಲಿ ಬೀಸಿದ ತಂಗಾಳಿ, ಚುಚ್ಚಿದ ಮುಳ್ಳುಗಳು, ಉಂಡ ಸಿಹಿ-ಕಹಿಗಳನ್ನು ಪ್ರಾಮಾಣಿಕವಾಗಿ ದಾಖಲಿಸಿದ್ದಾರೆ. ಅವರು ತನ್ನ ಬಗ್ಗೆ ಹೇಳಿಕೊಳ್ಳುತ್ತಲೇ ಸುತ್ತಲ ಸಮಾಜದ ಒಳಿತನ್ನೂ, ಹುಳುಕನ್ನೂ ನಮಗೆ ತಿಳಿಸುತ್ತಾರೆ.
©2024 Book Brahma Private Limited.