`ಎಳನಿಂಬೆ’ ರಾಮದಾಸ್ ಅವರ ಆತ್ಮಕಥನವಾಗಿದೆ. ಈ ಆತ್ಮಚರಿತ್ರೆ ಒಂದು ಸಾಹಸಗಾಥೆ. ಬಾಲ್ಯದಲ್ಲಿನ ತಮ್ಮ ಬಡತನದ ದೆಸೆಯಿಂದಾಗಿ ಎದುರಾದ ಅತೀವ ದುಃಖಮಯ ಸನ್ನಿವೇಶಗಳನ್ನು ಪುಟ್ಟ ಬಾಲಕನಾಗಿ ಮುಗ್ಧತೆಯಿಂದ ಸ್ವೀಕರಿಸಿದ ರೀತಿ, ಅವರ ತಾಳ್ಮೆ ನಾವು ಮೆಚ್ಚುವಂತಿದೆ. ಅಂಥ ಕಷ್ಟದ ಕುಲುಮೆಯಲ್ಲಿ ಬೆಂದು ಪಕ್ವವಾಗಿ ಎಂಥ ಪರಿಸ್ಥಿತಿಯಲ್ಲೂ ಸಾಹಿತ್ಯದ ನಂಟು ಬಿಡದೆ, ಓದಿಗೆ ಬೆನ್ನು ತೋರಿಸದೆ ಮುಂದೆ ಎಲ್ಲ ಪ್ರಕಾರಗಳಲ್ಲೂ ಕೃತಿ ರಚನೆ ಮಾಡಿ ಪ್ರಶಸ್ತಿಗಳಿಸಿದ ಲೇಖಕರ ಬಾಲ್ಯದ ಕಥೆ.
ರಾಮದಾಸ್ ಅವರು ಹುಟ್ಟಿದ್ದು 01-02-1940 ರಲ್ಲಿ. ಅವರ ವಿದ್ಯಾಭ್ಯಾಸ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗುಂಡ್ಲುಪೇಟೆ, ಟಿ.ನರಸೀಪುರ, ವಿದ್ಯೋದಯ ಶಾಲೆ ಟಿ.ನರಸೀಪುರ, ಯುವರಾಜಾಸ್ ಕಾಲೇಜು ಮೈಸೂರು, ಮಹಾರಾಜಾಸ್ ಕಾಲೇಜು, ಈಸೂರು, ಮಾನಸ ಗಂಗೋತ್ರಿ, ಮೈಸೂರು, ಎಂ.ಎ. ಮಾಡಿದ್ದಾರೆ. ಮುಲ್ಕಿ ವಿಜಯ ಕಾಲೇಜಿನಲ್ಲಿ ಮೂರು ವರ್ಷ ಕನ್ನಡ ಉಪನ್ಯಾಸಕರಾಗಿ, ಪೂರ್ಣ ಪ್ರಜ್ಞಾ ಕಾಲೇಜು, ಉಡುಪಿ-ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಪ್ರಕಟಿತ ಕೃತಿಗಳು: ಕಾವ್ಯ: ಋತಗೀತಾಮೃತ. ಕವನಗಳು- ಸ್ವಾತಂತ್ರೆಶ್ವರ ವಚನಗಳು, ಭಸ್ಮಾಸುರ, ಹದಿಹರೆಯದ ಹುಡುಗರು, ಹನಿಮಿನಿ, ಹಾಡು-ಪಾಡು. ನಾಟಕಗಳು: ಇದು ಭಾರತ, ಹೇಡಿಗಳು, ಬೆದರುಬೊಂಬೆ, ತಲೆದಂಡ, ಗರುಡಗಂಬ, ಸಾಕ್ಷಾತ್ಕಾರ, ಜೀವದಯಾಷ್ಟಮಿ ಮತ್ತು ಇತರ ನಾಟಕಗಳು. ...
READ MORE